ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಇಂದು ಪವರ್ ಸ್ಟಾರ್ ಗೆ ನಮನ ಏಕಕಾಲದಲ್ಲಿ ನಾಡಿನಾದ್ಯಂತ ಶೃದ್ದಾಂಜಲಿ…..

Suddi Sante Desk

ಬೆಂಗಳೂರು –

ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಯುವ ನಾಯಕ ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ರಾಜ್ಯಾದ್ಯಂತ ಇಂದು ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ವನ್ನು ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯದ 550 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇವತ್ತು ಸಂಜೆ 6 ಗಂಟೆಗೆ ಗೀತಾಂಜಲಿ,ಪುಷ್ಪಾಂಜಲಿ,ದೀಪಾಂಜಲಿ ಮೂಲಕ ಪುನೀತ್ ರಾಜಕುಮಾರ್ ಗೆ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ

ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುವುದು.ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದು ಇದರೊಂದಿಗೆ ಕ್ಯಾಂಡಲ್ ಹಚ್ಚಿ ಗೌರವ ಸಲ್ಲಿಸಲಾಗುವುದು.ಚಿತ್ರ ಪ್ರದರ್ಶಕರು ನಟ ಪುನೀತ್ ರಾಜಕುಮಾರ್ ಗೆ ನಮನ ಸಲ್ಲಿಸಲಿದ್ದಾರೆ. ಥಿಯೇಟರ್ ಸಿಬ್ಬಂದಿ ಮತ್ತು ಅಭಿಮಾನಿಗಳು ಈ ಒಂದು ಕಾರ್ಯಕ್ರಮ ದಲ್ಲಿ ಭಾಗಿಯಾಗಲಿದ್ದು ರಾಜ್ಯದ ಎಲ್ಲಾ ಥೇಟರ್ ಗಳಲ್ಲಿ ನಡೆಯಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.