ಬಾಗಲಕೋಟೆ –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ ಹುದ್ದೆಗೆ ಮತ್ತೊಮ್ಮೆ ಷಡಾಕ್ಷರಿ ಯವರು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಇತ್ತ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ ಹೌದು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಸಿ ಎಸ್ ಷಡಾಕ್ಷರಿ ರವರು ರಾಜ್ಯ ಖಜಾಂಚಿ ಸ್ಥಾನದ ಅಭ್ಯರ್ಥಿ ನಾಗರಾಜ್ ಜುಮ್ಮನ್ನನವರು ಚುನಾವಣಾ ಪ್ರಚಾರದ ಭಾಗವಾಗಿ ಬಾಗಲಕೋಟೆ ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕಿನ ಪದಾಧಿಕಾರಿ ಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಮತಯಾಚಿಸಿದರು
ಷಡಾಕ್ಷರಿ ರವರು ಮತ್ತು ಜುಮ್ಮನ್ನನವರು ಸಂಘದಲ್ಲಿ ಪ್ರಾದೇಶಿಕ ಸ್ಥಾನಮಾನ, ಸಾಮಾಜಿಕ ನ್ಯಾಯ, ಸಂಘ ದಲ್ಲಿ ಆರ್ಥಿಕ ಶಿಸ್ತು,ಪಾರದರ್ಶಕ ಆಡಳಿತ, ಮೂಲ ಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸುವುದು, 5 ವರ್ಷ ಗಳ ಸಂಘಟನೆಯ ಹೋರಾಟ, ಸಂಘದ ಸಾಮಾಜಿಕ ಕಾರ್ಯಕ್ರಮಗಳು,ಬೆಂಗಳೂ ರಿನಲ್ಲಿ ನೌಕರರ ಭವನ, ಸುಸಜ್ಜಿತ ವಸತಿ ವ್ಯವಸ್ಥೆ, ತಾಲ್ಲೂಕು ಜಿಲ್ಲಾ ಸಂಘದ ಕಟ್ಟಡ
ಭೌತಿಕ ಸೌಲಭ್ಯಗಳನ್ನು ನಿರ್ಮಿಸುವುದು ,ನೌಕರರ ಪರವಾಗಿ 25 ಕ್ಕೂ ಹೆಚ್ಚು ಸರ್ಕಾರಿ ಆದೇಶಗಳು, 17% ಮಧ್ಯಂತರ ಪರಿಹಾರ, 7ನೇ ವೇತನ ಆಯೋಗದ ಜಾರಿ, ಭವಿಷ್ಯದ ಹೆಜ್ಜೆಗಳು, NPS ರದ್ಧತಿ, ಕೇಂದ್ರ ಮಾದರಿ ವೇತನ, ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆ ಮುಂತಾದ ನೌಕರರ ಪರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ,, ವಿಠ್ಠಲ ವಾಲಿಕಾರ, ನಿಲನಾಯಕ, ಸತ್ಯರೆಡ್ಡಿ,ಮತ್ತು ಧಾರವಾಡದ ಎಂ ಎಫ್ ಸಿದ್ದನಗೌಡ್ರು, ಬಿಜಾಪುರದ ಸುರೇಶ್ ಸೇಡಶ್ಯಾಳ ರವರು ಎಲ್ಲಾ ತಾಲೂಕು ಅಧ್ಯಕ್ಷರುಗಳಾದ D Y ಅಂಬಿಗೇರ, ಪ್ರಕಾಶ್ ಹೊಸಮನಿ, P B ಅಜ್ಜಣ್ಣನವರ ಪರಶುರಾಮ ಪಮ್ಮಾರ, B R ಹನಗಂಡಿ, ಸಂಗಮೇಶ ಪಾಟೀಲ್, P V ಜಾದವ, ಜಿಲ್ಲೆಯ ಕಾರ್ಯಕಾರಿ ಸಮಿತಿಯ ಸದಸ್ಯರು, ತಾಲೂಕ ಸಂಘದ ಕಾರ್ಯದರ್ಶಿ, ರಾಜ್ಯ ಪರಿಷತ್ ಸದಸ್ಯರು, ಖಜಾಂಚಿ ಸೇರಿದಂತೆ ಎಲ್ಲಾ ಪದಾಧಿಕಾರಿ ಗಳು,
ನಿರ್ದೇಶಕರುಗಳು, PDO ಸಂಘದ ರಾಜ್ಯ ಅಧ್ಯಕ್ಷರಾದ ರಾಜು ವಾರದ, ರಾಜ್ಯ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ತಿಮ್ಮೇಗೌಡರು, ರುದ್ರಪ್ಪ,ಗಿರಿಗೌಡರು, ಬಸವರಾಜ ಎಸ್, ಸದಾನಂದ, ಹರಿ ರಾಮಕೃಷ್ಣರವರು, ಪ್ರಶಾಂತ್, ಪಾಂಡುರಂಗ, ನಾಗಭೂಷಣ್, ದಿನೇಶ್, ಸರ್ವೇ ಇಲಾಖೆಯ ಬಸವರಾಜ್, ಚಂದ್ರಶೇಖರ್ ಸಿದ್ದಬಸಪ್ಪ,ಸತ್ಯರೆಡ್ಡಿ,ರಾಜಶೇಖರ್,
ನವೀನ್ ಗಂಗಾರೆಡ್ಡಿ, ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳು ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ….