ಹೊಸಪೇಟೆ –
ಎತ್ತಿನ ಬಂಡಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣವಾಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಉಜೈನಿ ಬಳಿಯ ಬೆನಕನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.

ಶಿವಕುಮಾರ್ (34)ನಿವೇದಿತ(23)
ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.ಸಂಡೂರಿನ ಶಿವಕುಮಾರ್ ಮತ್ತು ಜಗಳೂರು ತಾಲೂಕಿನ ಹೊಸಕೇರಿ ಗ್ರಾಮದ ನಿವೇದಿತ ಇತ್ತೀಚೆಗೆ ವಿವಾಹ ವಾಗಿದ್ದರು.ಇವರೇ ಮೃತರಾದವರಾಗಿದ್ದಾರೆ.

ತವರು ಮನೆಗೆ ಬಂದಿದ್ದ ನಿವೇದಿತ ಅವರನ್ನು ಕರೆದುಕೊಂಡು ಮನೆಗೆ ಮರಳುವ ಸಂದರ್ಭದಲ್ಲಿ ಈ ಒಂದು ಅಪಘಾತ ನಡೆದಿದೆ.

ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.