ರಾಯಚೂರು –
ಸರ್ಕಾರಿ ಶಾಲೆಯ ಮೇಲ್ಚಾವಣಿ ಕುಸಿತಗೊಂಡು ದೊಡ್ಡ ದೊಂದು ಅನಾಹುತ ತಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ ಶಾಲೆ ನಡೆಯುವ ಸಮಯದಲ್ಲಿಯೇ ದೊಡ್ಡ ಅನಾಹುತ ವೊಂದು ತಪ್ಪಿದ್ದು ಇಬ್ಬರು ಮಕ್ಕಳಿಗೆ ತೀವ್ರ ಗಾಯಗಳಾಗಿವೆ
ಮುಂದಿನ ಬೆಂಚ್ ನಲ್ಲಿ ಕುಳಿತ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ 2ನೇ ತರಗತಿಯ ರಾಘವೇಂದ್ರ ಕೊರೆಕಾರ್ (7) ಅಪ್ಪಾಜಿ ಹನುಮೇಶ್ ( 7) ಗಾಯಗೊಂಡ ವಿದ್ಯಾರ್ಥಿಗಳಾ ಗಿದ್ದಾರೆ.
ಕಳೆದ 8 ವರ್ಷಗಳ ಹಿಂದೆ ಅಷ್ಟೇ ನಿರ್ಮಾಣ ಮಾಡಿದ್ದು ಶಾಲೆಯ ಕಟ್ಟಡ ವನ್ನು.ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಮೇಲ್ಛಾವಣಿ ಕುಸಿತದ ಶಂಕೆ ವ್ಯಕ್ತಪಡಿಸಿದ್ದಾರೆ.ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್.ಇನ್ನೂ ಗಾಯಗೊಂಡ ವಿದ್ಯಾರ್ಥಿ ಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು