ಬೆಂಗಳೂರು –
ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.ಹೌದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ನಾಳೆಯಿಂದ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಾರ್ಚ್ 13 ಎರಡನೇ ಶನಿವಾರವಾಗಿದ್ದು ಭಾನುವಾರ ರಜಾ ದಿನವಾಗಿರುವ ಕಾರಣ ನಿನ್ನೆ ಯಿಂದಲೇ ಬ್ಯಾಂಕುಗಳು ಬಂದ್ ಆಗಿದ್ದು, ಈಗ ಮುಷ್ಕರದಿಂದಾಗಿ ಸೋಮವಾರ ಮತ್ತು ಮಂಗಳ ವಾರ ಸಹ ಬ್ಯಾಂಕಿಂಗ್ ಸೇವೆ ವ್ಯತ್ಯಯ ವಾಗಲಿದ್ದು ಇದರಿಂದಾಗಿ ಸಾರ್ವಜನಿಕರ ಅದರಲ್ಲೂ ವ್ಯಾಪಾರ ವಹಿವಾಟು ಮಾಡುವವರ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ.
ಇನ್ನೂ ಈ ಒಂದು ಬ್ಯಾಂಕ್ ಗಳ ಪ್ರತಿಭಟನೆ ಯಿಂದಾಗಿ ಬ್ಯಾಂಕ್ ನ ಇತರೆ ಸೇವೆಗಳಾದ ಆನ್ ಲೈನ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸ ಲಿದ್ದು, ಆಫ್ ಲೈನ್ ಸೇವೆಗಳಿಗೆ ಮಾತ್ರ ಈ ಮುಷ್ಕರ ಪರಿಣಾಮ ಬೀರಲಿದೆ.ATM ಗಳು ಎಂದಿನಂತೆ ಕೆಲಸ ಕಾರ್ಯವನ್ನು ನಿರ್ವಹಿಸಲಿವೆ.