ದಾವಣಗೆರೆ –
ಖಾತೆ ಬದಲಾವಣೆಗೆ ಎಂಟು ಲಕ್ಷಕ್ಕೆ ಬೇಡಿಕೆ ಇಟ್ಟು ಐದು ಲಕ್ಷ ರೂಪಾಯಿ ತಗೆದುಕೊಳ್ಳುವಾಗ ಪಿಡಿಓ ಮತ್ತು ಅಟೆಂಡರ್ ಎಸಿಬಿ ಬಲೆಗೆ ಬಿದ್ದ ಘಟನೆ ದಾವಣಗೇರಿ ಯಲ್ಲಿ ನಡೆದಿದೆ.5 ಲಕ್ಷ ರೂ.ಲಂಚದ ಸಮೇತ ಎಸಿಬಿ ಬಲೆಗೆ ಬಿದ್ದಿದ್ದಾರೆ ಪಿಡಿಓ ಅಟೆಂಡ ರ್ ಇಬ್ಬರು.
ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಈ ಇಬ್ಬರು ಸಿಕ್ಕಿಬಿದ್ದಿದ್ದಾರೆ ಅಧಿಕಾರಿಗಳು.ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮ ಪಂಚಾ ಯತಿನಲ್ಲಿ ಪಿಡಿಒ ಕೆ. ಅರುಣ್, ಅಟೆಂಡರ್ ಚನ್ನಪ್ಪ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.
ಕಿರಣಕುಮಾರ್ ಎಂಬುವರ ಖಾತೆಯನ್ನು ಬದಲಾ ವಣೆ ಮಾಡುವ ಉದ್ದೇಶದಿಂದಾಗಿ ಲಂಚದ ಹಣದ ಬೇಡಿಕೆ ಇಟ್ಟಿದ್ದರು ಇಬ್ಬರು.ಹೊನ್ನಾಳಿ ತಾಲೂಕಿನ ದೊಡ್ಡಕೆರೆಗ್ರಾಮ ನಿವಾಸಿ ಕಿರಣಕುಮಾರ್.ಖಾತೆ ಬದಲಾವಣೆಗೆ 8 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಅರುಣ್.
ಇಂದು ಮುಂಚಿತವಾಗಿ 5 ಲಕ್ಷ ರೂ ನಗದು ಹಣವ ನ್ನು ಸ್ವೀಕರಿಸುತ್ತಿದ್ದಾಗ ಇಬ್ಬರು ಎಸಿಬಿ ಬಲೆಗೆ ಬಿದ್ದಿ ದ್ದಾರೆ.ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದ್ದು ಎಸಿಬಿ ಪೂರ್ವ ವಲಯದ ಎಸ್ಪಿ ಜಯಪ್ರಕಾಶ್.ದಾವಣಗೆರೆ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಕೈತುಂಬಾ ಸಂಬಳ ಬರುತ್ತಿದ್ದರೂ ಲಂಚಕ್ಕೆ ಕೈ ಹಾಕಿದ್ದ ಇಬ್ಬರು ಸರ್ಕಾರಿ ನೌಕರರಿಗೆ ಕೈಹಿಡಿದು ಎಸಿಬಿ ಅಧಿಕಾರಿಗಳು ಟ್ಯಾಪ್ ಮಾಡಿ ವಶಕ್ಕೆ ತಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ