ಕೋವಿಡ್ ಗೆ ರಾಜ್ಯದಲ್ಲಿ ಇಬ್ಬರು ಶಿಕ್ಷಕಿಯರು ಬಲಿ – ಶೈಕ್ಷಣಿಕ ವರ್ಷ ಆರಂಭಗೊಂಡ ಬೆನ್ನಲ್ಲೇ ಆತಂಕ ದಲ್ಲಿ ನಾಡಿನ ಶಿಕ್ಷಕರು…..

Suddi Sante Desk

ಬೆಂಗಳೂರು –

ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಮತ್ತೆ ಇಬ್ಬರು ಗುರುಮಾತೆಯರು ನಿಧನರಾಗಿದ್ದಾರೆ.ಹೌದು ರಾಯ ಚೂರು ಜಿಲ್ಲೆಯಲ್ಲಿ ಇಬ್ಬರು ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಮೃತರಾಗಿದ್ದಾರೆ.ಪುಚ್ಚಲದಿನ್ನಿ ಶಾಲಾ ಸಹ ಶಿಕ್ಷಕಿ ಮಂಜುಳಾ ಮತ್ತು ಮುನ್ನೂರುವಾರಿ ಶಾಲೆಯ ಶಿಕ್ಷಕಿ ಜಯಶ್ರೀದೇವಿ ಸೋಂಕಿಗೆ ಬಲಿ ಯಾದ ಗುರುಮಾತೆಯರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಇವರಿಗೆ ಸೋಂಕು ಪತ್ತೆ ಯಾಗಿತ್ತು ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿ ದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳು ತ್ತಿದ್ದ ಇವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಇನ್ನೂ ಶಿಕ್ಷಕಿ ಮಂಜುಳಾ ಅವರು ಸ್ವಗ್ರಾಮ ಬೆಳಗಾ ವಿ ಜಿಲ್ಲೆಯಲ್ಲಿ ಮತರಾಗಿದ್ದರೆ ಇನ್ನೂ ಇತ್ತ ಜಯಶ್ರೀ ದೇವಿ ಅವರು ರಾಯಚೂರು ನಗರದಲ್ಲಿ ಸಾವಿಗೀ ಡಾಗಿದ್ದಾರೆ. ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ ಇಬ್ಬರು ಶಿಕ್ಷಕಿಯರು ಕರೋನಾ ಸೋಂಕಿನಿಂದಾಗಿ ಪ್ರಾಣವನ್ನು ಕಳೆದುಕೊಂಡಿದ್ದು ಹೀಗಾಗಿ ಶಿಕ್ಷಕರಲ್ಲಿ ಆತಂಕ ಮೂಡಿದೆ.ಇನ್ನೂ ಇತ್ತ ಮೃತರಾದ ಶಿಕ್ಷಕರಿ ಯರಿಗೆ ನಾಡಿನ ಮೂಲೆಗಳಿಂದ ಸಂತಾಪವನ್ನು ಸೂಚಿಸಿದ್ದಾರೆ. ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರು ಸಂತಾಪವನ್ನೂ ಸೂಚಿಸಿದ್ದಾರೆ.

ಸಂಘದ ಪರವಾಗಿ ಶಿಕ್ಷಕರು ಮತ್ತು ಸದಸ್ಯರಾದ ಪವಾಡೆಪ್ಪ, ಗುರು ತಿಗಡಿ,ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣು ಪೂಜಾರ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ, ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವ ಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜು ಳಾ,ಗೋವಿಂದ ಜುಜಾರೆ,ದಾವಣಗೆರೆ ಸಿದ್ದೇಶ, ನಾಗರಾಜ ಕಾಮನ ಹಳ್ಳಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ,, ಆರ್ ನಾರಾಯಣಸ್ವಾಮಿ ಚಿಂತಾಮಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಎನ್ ಎಂ ಕುಕನೂರ ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿ ಮಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾರ, ರುದ್ರೇಶ ಕುರ್ಲಿ, ಶಿವಾನಂದ ಬೆಂಚಿಕೇರಿ, ಶಿವಮೊಗ್ಗ ಸೋಮಶೇಖ ರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಎಂ ಜಿ ಚರಂತಿಮಠ ಬೈಲಹೊಂಗಲ, ಕೋಲಾರ ಶ್ರೀನಿವಾಸ,ಕೆ ಎಮ್ ಮುನವಳ್ಳಿ ಬಿ ವಿ ಅಂಗಡಿ ಎಸ್ ಸಿ ಹೊಳೆಯಣ್ಣವ ರ ಶಿವಾನಂದ ಬೆಂಚಿಕೇರಿ. ಪ್ರವೀಣ ಪಾಳೇಕರ, ನೆಲಮಂಗಲ ಮಲ್ಲಿಕಾರ್ಜುನ, ಮುತ್ತಣ್ಣ ಹುಬ್ಬಳ್ಳಿ ಈರಪ್ಪ ಸೊರಟೂರ, ಎಸ್ ಎ ಜಾಧವ ಎಸ್ ಎಸ್ ಧನಿಗೊಂಡ,ಸಾವಿತ್ರಿ ಜಾಲಿಮ ರದ, ಸುಸ್ಮಾ ನರ್ಚಿ, ನಾಗರಾಜ ಹಾಲಿಗೇರಿ, ಕೆ ಬಿ ಕುರಹಟ್ಟಿ, ಪಿ ಎಸ್ ಅಂಕಲಿ, ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ

ಇನ್ನೂ ಇವರೊಂದಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ಪರವಾಗಿ ಅಧ್ಯಕ್ಷರಾದ ಶಂಭುಲಿಂಗ ನಗೌಡ ಪಾಟೀಲ ಮತ್ತು ಕಾರ್ಯಾದರ್ಶಿ ಚಂದ್ರಶೇ ಖರ್ ನುಗ್ಗಲಿ ಸರ್ವ ಸದ ಸ್ಯರ ಪರವಾಗಿ ಸಂತಾಪ ವನ್ನು ಸೂಚಿಸಿ ನಮನ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಪರವಾಗಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ಹೆಚ್ ಇವರು ಸರ್ವ ಸದಸ್ಯ ರ ಪರವಾಗಿ ಸಂತಾಪವನ್ನು ಸೂಚಿಸಿ ನಮನವನ್ನು ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.