ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು – ನಿವೃತ್ತ ಶಿಕ್ಷಕಿಯ ಬಳಿ ಲಂಚಕ್ಕೆ ಬೇಡಿಕೆ…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ನೌಕರರು – ನಿವೃತ್ತ ಶಿಕ್ಷಕಿಯ ಬಳಿ ಲಂಚಕ್ಕೆ ಬೇಡಿಕೆ…..

ಚಿತ್ರದುರ್ಗ

ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸು ತ್ತಿದ್ದ ಇಬ್ಬರು ಸರ್ಕಾರಿ ನೌಕರರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ  ಖಜಾನೆ ಕಚೇರಿಯಲ್ಲಿ ಈ ಒಂದು ಲೋಕಾಯುಕ್ತ ರೇಡ್ ನಡೆದಿದೆ.ಕಚೇರಿಯ.ಎಫ್.ಡಿ.ಎ. ವರಲಕ್ಷ್ಮಿ ಹಾಗೂ ಮುಖ್ಯ ಲೆಕ್ಕಿಗ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ

ಶಿಕ್ಷಕಿಯ ಪೆನ್ಷನ್ ಹಣ ಕ್ಲಿಯರ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಇಬ್ಬರು, ನಿವೃತ್ತ ಶಿಕ್ಷಕಿ ಶಾರದಮ್ಮ ಅವರ ಬಳಿ 2 ಸಾವಿರ ಲಂಚ ಸ್ವೀಕರಿಸುವಾಗ ರೇಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದ್ದು ಪಿ.ಐ. ಗುರುಬಸವರಾಜ್, ಮಂಜುನಾಥ್, ದಾಳಿಯಲ್ಲಿ ಭಾಗಿಯಾಗಿದ್ದರು.

ಸುದ್ದಿ ಸಂತೆ ನ್ಯೂಸ್ ಚಿತ್ರದುರ್ಗ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.