ದಾವಣಗೆರೆ –
ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು – ಮಾವನ ಮನೆಯಲ್ಲಿ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್ ಆದ ಇಬ್ಬರು ಭ್ರಷ್ಟ ಅಧಿಕಾರಿಗಳು ಹೌದು ಬೆಳ್ಳಂ ಬೆಳಿಗ್ಗೆ ಇಬ್ಬರು ಭ್ರಷ್ಟ ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.
ಪ್ಲಾನ್ ಅಪ್ರೂವಲ್ ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ನೌಕರರು ಟ್ರ್ಯಾಪ್ ಆಗಿದ್ದಾರೆ. ಹರಿಹರ ಇಓ ಎನ್ ರವಿ, ಪಿಡಿಓ ರಾಘವೇಂದ್ರ ಲೋಕಾ ಯುಕ್ತ ಬಲೆಗೆ ಬಿದ್ದವರಾಗಿದ್ದಾರೆ. ದಾವಣಗೆರೆ ನಗರದ ಮಾವನ ಮನೆಯಲ್ಲಿದ್ದಾಗ ಲಂಚ ಸ್ವೀಕಾರ ಮಾಡಿದ್ದರು.
ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ಗೌರಮ್ಮ ಗಿರೀಶ್ ಅವರ ಅಳಿಯನಾಗಿದ್ದು.ಶ್ರೀ ರಾಮಸೇನೆ ಕಾರ್ಯಕರ್ತ ಶ್ರೀನಿವಾಸ್ ಎಂಬುವ ವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.1.60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಇಓ,ಪಿಡಿಓ.1.50 ಲಕ್ಷ ರೂ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿ ದ್ದಾರೆ.ಲೋಕಾಯುಕ್ತ ಎಸ್ಪಿ ಕೌಲ್ಯಾಪುರೆ ಮಾರ್ಗದರ್ಶನದಲ್ಲಿ ದಾಳಿಯಾಗಿದೆ.
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..