ಮಂಡ್ಯ –
ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಗುದ್ದಾಟ ಮಾಡುತ್ತಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಕಂಡು ಬಂದಿದೆ.ಹೌದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹುದ್ದೆಗೆ ಇಬ್ಬರು ಅಧಿಕಾರಿಗಳ ನೇಮಕವಾಗಿರುವುದು ಪೈಪೋಟಿ ಜೊತೆಗೆ ಗೊಂದಲಕ್ಕೆ ಕಾರಣವಾಗಿದೆ.ಡಿಡಿಪಿಯು ಹುದ್ದೆಗೆ ಉಮೇಶ್ ಹಾಗೂ ಮಂಜುನಾಥ್ ಪ್ರಸನ್ನ ಎಂಬುವರನ್ನು ನೇಮಕ ಮಾಡಲಾಗಿದೆ.ಈ ಒಂದು ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ರಾಜ್ಯ ಸರ್ಕಾರದಿಂದಲೇ ಪರಿಹಾರ ಸಿಗಬೇಕಿದ್ದು ಅಲ್ಲಿಯವರೆಗೂ ಗೊಂದಲ ಮುಂದುವರೆಯಲಿದೆ ಇನ್ನೂ ಉಮೇಶ್ ಅವರು ಡಿಡಿಪಿಯು ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ ಸೆಪ್ಬಂಬರ್ 5ರಂದು ಇವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಲಾಗಿತ್ತು. ತೆರವಾಗಿದ್ದ ಜಾಗಕ್ಕೆ ಬೆಂಗಳೂರಿನ ಪಿಯು ಬೋರ್ಡ್‌ನ ಡಿಡಿ ಮಂಜುನಾಥ ಪ್ರಸನ್ನ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಇದರನ್ವಯ ಮಂಡ್ಯಕ್ಕೆ ಬಂದು ಅಧಿಕಾರವನ್ನು ಸ್ವೀಕಾರ ಮಾಡಿದ್ದರು.ಈ ನಡುವೆ ವರ್ಗಾವಣೆ ವಿರುದ್ಧ ಉಮೇಶ್ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಮೆಟ್ಟಿಲೇರಿದ್ದರು ಎರಡು ವರ್ಷಕ್ಕೆ ಮುನ್ನವೇ ಅಂದರೆ ಅವಧಿ ಪೂರ್ವವೇ ತನ್ನನ್ನು ವರ್ಗಾವಣೆ ಮಾಡಿದ್ದು ಆದೇಶವನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದರು.ಇದನ್ನು ಪುರಸ್ಕರಿಸಿರುವ ಮಂಡಳಿ ಮಂಡ್ಯ ಡಿಡಿ ಹುದ್ದೆಯಲ್ಲಿಯೇ ಮುಂದುವರೆಯುವಂತೆ ಉಮೇಶ್ ಅವರ ಪರವಾಗಿ ಸೆ.19ರಂದು ಆದೇಶ ನೀಡಿದೆ.ಈ ಹಿನ್ನೆಲೆಯಲ್ಲಿ ಅವರು ಕೂಡ ಮತ್ತೆ ವಾಪಸ್ ಬಂದಿದ್ದಾರೆ.ಇಬ್ಬರಿಗೂ ಆದೇಶವಿರುವುದರಿಂದ ಕಚೇರಿಯಲ್ಲಿ ಪ್ರತ್ಯೇಕ ಕುರ್ಚಿಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.ಸರ್ಕಾರದ ಮುಂದಿನ ಆದೇಶದ ಬಳಿಕ ಯಾರಿಗೆ ಗೇಟ್‌ಪಾಸ್ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
Suddi Sante > Education News > ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಡಿಡಿಪಿಯು ಕಚೇರಿಯಲ್ಲಿ ಗುದ್ದಾಟ – ಶಿಕ್ಷಣ ಇಲಾಖೆಯ ಅಧಿಕಾರಿಗಳಿಬ್ಬರ ಗುದ್ದಾಟದ ನಡುವೆ ಕಣ್ಮುಚ್ಚಿ ಕುಳಿತ ಸರ್ಕಾರ
ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳು ಡಿಡಿಪಿಯು ಕಚೇರಿಯಲ್ಲಿ ಗುದ್ದಾಟ – ಶಿಕ್ಷಣ ಇಲಾಖೆಯ ಅಧಿಕಾರಿಗಳಿಬ್ಬರ ಗುದ್ದಾಟದ ನಡುವೆ ಕಣ್ಮುಚ್ಚಿ ಕುಳಿತ ಸರ್ಕಾರ
Suddi Sante Desk23/09/2022
posted on