ಹಾವೇರಿ – ಮಂಚಾಯಿತಿ ಚುನಾವಣೆ ಮತ ಎಣಿಕೆಗೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ತುಂಗಾ ಮೇಲ್ಡಂಡೆ ಕಾಲುವೆಗೆ ಉರುಳಿಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬಸವನಕಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು ಪ್ರಕಾಶ ಬನ್ನಿಮಟ್ಟಿ (40) ಹಾಗೂ ಸಿದ್ದನಗೌಡ ಬಿಷ್ಟನಗೌಡರ (45) ಎಂದು ಗುರುತಿಸಲಾಗಿದೆ.

ಅಭ್ಯರ್ಥಿ ಪರ ಮತ ಎಣಿಕೆಯ ಏಜೆಂಟ್ ಆಗಿ ಪ್ರಕಾಶ್ ಹಾವೇರಿಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿಬಿದ್ದಿದೆ.

ಇನ್ನೂ ವಿಷಯ ತಿಳಿದ ಹಾವೇರಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.