ಮೈಸೂರು –
ನಿವೇಶನದ ಖಾತೆಯನ್ನು ಬದಲಾವಣೆ ಮಾಡಲು ಹಣದ ಬೇಡಿಕೆ ಇಟ್ಟು ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಮತ್ತು ಎಸ್‌ಡಿಎ ಇಬ್ಬರು ಮೈಸೂರಿನಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.ಎಚ್.ಡಿ.ಕೋಟೆ ತಾಲ್ಲೂಕು ಮಾದಾಪುರ ಗ್ರಾಮ ಪಂಚಾಯಿತಿ ಪಿಡಿಓ ಲೋಕೇಶ್ ಮತ್ತು ಎಸ್‌ಡಿಎ ವೆಂಕಟರಾಜು ಎಂಬವರೇ ಬಲೆಗೆ ಬಿದ್ದವರಾಗಿದ್ದಾರೆ.ವ್ಯಕ್ತಿಯೊಬ್ಬರ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿ ಲಂಚ ಪಡೆಯುವಾಗ ದಾಳಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ.

ವ್ಯಕ್ತಿಯೊಬ್ಬರು 9/15 ಮೀಟರ್ ನಿವೇಶನವನ್ನು ಖರೀದಿಸಿದ್ದು, ಸದರಿ ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಮತ್ತು 11ಎ ನಮೂನೆಯನ್ನು ಬದಲಾವಣೆ ಮಾಡಿಕೊಡಲು ಇವರು 20 ಸಾವಿರ ರೂ.ಬೇಡಿಕೆ ಇಟ್ಟಿದ್ದರು. ಇದರಲ್ಲಿ ಫೆಬ್ರುವರಿ 21 ರಂದು ವೆಂಕಟರಾಜು ಅವರು 10 ಸಾವಿರ ರೂ.ಮುಂಗಡ ಪಡೆದು ಉಳಿದ ಹಣವನ್ನು ಪಿಡಿಓ ಲೋಕೇಶ್ ಅವರಿಗೆ ನೀಡಲು ಹೇಳಿದ್ದರು.
ಇದರಂತೆ ವ್ಯಕ್ತಿಯು ಮಾದಾಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಳಿದ 10 ಸಾವಿರ ರೂ. ಅನ್ನು ಲೋಕೇಶ್‌ಗೆ ನೀಡುವಾಗ ಕಾರ್ಯಾಚರಣೆ ನಡೆಸಿ ಎಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಎಸ್ಪಿ ಅರುಣಾಂಗ್ಶು ಗಿರಿ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಪರಶುರಾಮಪ್ಪ, ಪಿಐ ಎ.ಕರೀಂ ರಾವತರ್ ಮತ್ತು ಕೆ.ಎಸ್.ನಿರಂಜನ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.