ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು – ಬಸ್ ಗಾಗಿ ರಸ್ತೆ ಪಕ್ಕದಲ್ಲೇ ನಿಂತುಕೊಂಡಿದ್ದ ಇಬ್ಬರು…..

Suddi Sante Desk
ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು – ಬಸ್ ಗಾಗಿ ರಸ್ತೆ ಪಕ್ಕದಲ್ಲೇ ನಿಂತುಕೊಂಡಿದ್ದ ಇಬ್ಬರು…..

ಹಾವೇರಿ

ಕಾರು ಡಿಕ್ಕಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಹಾವೇರಿ ಯಲ್ಲಿ ನಡೆದಿದೆ. ಜಿಲ್ಲೆಯ ತಡಸ ಸಮೀಪದ ನೀರಲಗಿ ಕ್ರಾಸ್ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.ಇನ್ನೂ ರಸ್ತೆ ಪಕ್ಕದಲ್ಲೇ ಇಬ್ಬರು ನಿಂತುಕೊಂಡಿದ್ದು ಅವರಿಗೆ ಕಾರ್ ಡಿಕ್ಕಿಯಾಗಿದೆ ಇಬ್ಬರು ಸ್ಥಳದಲ್ಲೇ ಸಾವಿ ಗೀಡಾಗಿದ್ದಾರೆ.

ಇನ್ನೂ ಅಪಘಾತ ನಂತರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಯಿತು.ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ಸಮೀಪದ ರಾ.ಹೆದ್ದಾರಿ 4 ರ ನೀರಲಗಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ.

ರಸ್ತೆ ಬದಿ ನಿಂತಿದ್ದ ಇಬ್ಬರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹೀಗಾಗಿ ಅಪಘಾತದಿಂದ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 4ನ್ನು ತಡೆದು ಪ್ರತಿಭಟನೆ ಮಾಡಿದರು

ಎನ್ ಎಮ್ ತಡಸ್ ನೀರಲಗಿ ಗ್ರಾಮದ ಚಿದಾನಂದ ನಿಂಗಪ್ಪ ಶೆರೆವಾಡ (55) ವಿರೂಪಾ ಕ್ಷಪ್ಪ ಕಾಳೆ(60) ಸ್ಥಳದಲ್ಲೇ ಸಾವಿಗೀಡಾದ ದುರ್ದೈವಿಗಳಾಗಿದ್ದಾರೆ.

ತಮ್ಮ ಗ್ರಾಮದಿಂದ ಬೆಳಿಗ್ಗೆ ಶಿಗ್ಗಾವಿಗೆ ತೆರಳಲು ಬಸ್ ಗಾಗಿ ಕಾಯುತ್ತ ನಿಂತಿದ್ದ ವೇಳೆ ಹುಬ್ಬಳ್ಳಿ ಕಡೆಯಿಂದ ಬಂದ KA 22 MB 8197 ನೋಂದಣಿ ಸಂಖ್ಯೆಯ ಕಾರ್ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ.

ಇಬ್ಬರೂ ಅಮಾಯಕರು ದುರಂತ ಸಾವು ಕಂಡಿದ್ದಾರೆ.ಅಪಘಾತದ ನಂತರ ರಸ್ತೆ ತಡೆದು ಪ್ರತಿಭಟನೆಯನ್ನು ಮಾಡಲಾಯಿತು ಘಟನೆ ಖಂಡಿಸಿ ಎನ್ ಎಂ ತಡಸ ನೀರಲಗಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳನ್ನು ತಡೆದು ಪ್ರತಿಭಟನೆ

ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು.ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.