ಹಾಸನ –
ಮಹಾಮಾರಿ ಕರೋನಾ ಅಬ್ಬರು ತುಸು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿಯೇ ಮತ್ತೆ ತನ್ನ ಆರ್ಭಟ ಆರಂಭಿಸುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಹೌದು ಇದಕ್ಕೇ ಹಾಸನ ಜಿಲ್ಲೆಯಲ್ಲಿ ಸಾವಿಗೀಡಾದ ಇಬ್ಬರು ಅಧಿಕಾರಿಗಳೇ ಸಾಕ್ಷಿಯಾಗಿದೆ.
ಮಹಾಮಾರಿ ಕರೋನಾಗಿ ಹಾನಸ ಜಿಲ್ಲೆಯಲ್ಲಿ ಇಂದು ಒಂದೇ ದಿನ ಇಬ್ಬರು ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಬಲಿ ತಗೆದುಕೊಂಡಿದೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯ ಎ.ಎಸ್.ಐ. ಬಾಲಕೃಷ್ಣ (59)
ಗೊರೂರು ಠಾಣೆಯ ಎ.ಎಸ್.ಐ.ದೊರೆಸ್ವಾಮಿ (57) ಸಾವಿಗೀಡಾದ ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ದೊರೆಸ್ವಾಮಿ ಇತ್ತೀಚೆಗೆ ಅಷ್ಟೇ ಎ.ಎಸ್.ಐ. ಆಗಿ ಬಡ್ತಿ ಪಡೆದು ಗೊರೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ವರ್ಗಾವಣೆ ಬೆನ್ನಲ್ಲೇ ಹೊಸ ಪೊಲೀಸ್ ಠಾಣೆಯಲ್ಲಿ ಹೊಸ ಕರ್ತವ್ಯ ಆರಂಭ ಮಾಡಿದ್ದ ಇಬ್ಬರಿಗೂ ಕೊರೊನ ಸೋಂಕು ತಗುಲಿತ್ತು ನಂತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.
ಇಂದು ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವಿಗೀಡಾದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ನಿಧನದಿಂದಾಗಿ ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೋಕರ ವಾತಾರವಣ ಕಂಡು ಬರುತ್ತಿದ್ದು ಹಾಸನ ಜಿಲ್ಲಾ ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಅಗಲಿದ ಇಬ್ಬರು ಸಹೋದ್ಯೋಗಿ ಪೊಲೀಸ್ ಅಧಿಕಾರಿಗಳಿಗೆ ಭಾವಪೂರ್ಣ ಶೃದ್ದಾಂಜಲಿಯೊಂದಿಗೆ ನಮನ ಸಲ್ಲಿಸಿದ್ದಾರೆ.