ಚಿಕ್ಕಬಳ್ಳಾಪುರ – ಚಾಮರಾಜನಗರ
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.ಒಂದು ಕಡೆ ಗುಣಮುಖರಾಗುವವರ ಸಂಖ್ಯೆ ಕೂಡಾ ಹೆಚ್ಚಳ ವಾಗುತ್ತಿದ್ದರೆ ಮತ್ತೊಂದೆಡೆ ಸಾವಿನ ಪ್ರಮಾಣ ಕೂಡಾ ಹೆಚ್ಚಾಗುತ್ತಿದ್ದು ಇದಕ್ಕೆ ಪೊಲೀಸ್ ಇಲಾಖೆ ಕೂಡಾ ಹೊರತಾಗಿಲ್ಲ.ಹೌದು ಒಂದೇ ದಿನ ರಾಜ್ಯದ ಲ್ಲಿ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿಗಳು ಸಾವಿಗೀಡಾಗಿದ್ದಾರೆ.

ಚಿಕ್ಕಬಳ್ಳಾಪೂರ ದಲ್ಲಿ ಕೊರೊನಾ ಹೆಮ್ಮಾರಿಗೆ ಪೊಲೀಸ್ ಮುಖ್ಯ ಪೇದೆ ಸಾವಿಗೀಡಾಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಲೋಕೇಶ್ ಯಾದವ್ ಮೃತ ದುರ್ದೈವಿಯಾಗಿದ್ದಾರೆ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿ ಯಾಗದೆ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಇತ್ತ ಚಾಮರಾಜನಗರದಲ್ಲಿ ನಿವೃತ್ತ ಪಿಎಸ್ ಐ ಕೋರೊನಾ ಸೋಂಕಿನಿಂದ ಮೈಸೂರಿನ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು.ನಿವೃತ್ತ ಸಬ್ ಇನ್ಸ್ ಪೆಕ್ಟರ್ ಶಿವಣ್ಣ (76) ನಿಧರಾಗಿದ್ದಾರೆ. ಚಾಮರಾಜ ನಗರ ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದವ ರಾದ ಶಿವಣ್ಣರವರು ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಗೊಂಡು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವ ಹಿಸಿ, ಎ.ಎಸ್.ಐ ಆಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿ, ಅಲ್ಲಿಂದ ಭಡ್ತಿ ಪಡೆದು, ಶ್ರೀರಂಗಪಟ್ಟಣ, ನಂಜನ ಗೂಡು, ಕವಲಂದೆ, ತೆರಕಣಾಂಬಿ ಬಳಿಕ ಬಿಳಿಕೆರೆ ಯಲ್ಲಿ ನಿವೃತ್ತಿ ಹೊಂದಿದರು.

ಮೃತರಿಗೆ ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಮೃತರ ಪುತ್ರ ಡಿ.ಎಸ್.ಪ್ರೇಮ್ ಕುಮಾರ್ ಚಾಮರಾಜನಗರ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸು ತ್ತಿದ್ದಾರೆ