ಮೈಸೂರು
ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯ ಜೀಪ್ ವೊಂದು ಮರಕ್ಕೇ ಡಿಕ್ಕಿಯಾಗಿ ಸ್ಥಳದಲ್ಲಿಯೇ ಇಬ್ಬರು ಪೊಲೀಸ್ ಸಿಬ್ಬಂದ್ದಿಗಳಿಬ್ಬರು ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಸಿದ್ದನಕೊಪ್ಪಲು ಬಳಿ ಈ ಒಂದು ಅಪಘಾತದ ಘಟನೆ ನಡೆದಿದೆ.ಅಪಘಾತದಲ್ಲಿ ಎಎಸ್‌ಐ ಮತ್ತು ಹೆಡ್ ಕಾನ್ಸಟೇಬಲ್ ಇಬ್ಬರು ಸಾವಿಗೀಡಾಗಿದ್ದಾರೆ.ನಗರದ ಸಿದ್ದನಕೊಪ್ಪಲು ಗೇಟ್ ಬಳಿ ರಾತ್ರಿ ಈ ಒಂದು ಘಟನೆ ನಡೆದಿದ್ದು ಮೈಸೂರಿನ ಕೆಆರ್ ನಗರ ತಾಲ್ಲೂಕಿನ ಗ್ರಾಮದ ಹೆಡ್ ಕಾನ್ಸಟೇಬಲ್ ಶಾಂತಕುಮಾರ್ ಹಾಗೂ ಎಎಸ್‌ಐ ಮೂರ್ತಿ ಸಾವಿಗೀಡಾದ ಪೊಲೀಸ್ ಸಿಬ್ಬಂದ್ದಿಗಳಿಬ್ಬರಾಗಿದ್ದಾರೆ.
ಎಂದಿನಂತೆ ಮನೆಯಿಂದ ರಾತ್ರಿ ಕರ್ತವ್ಯಕ್ಕೇ ಠಾಣೆಗೆ ಆಗಮಿಸಿದ ಇಬ್ಬರು ಸಿಬ್ಬಂದ್ದಿಗಳು ಪೊಲೀಸ್ ಜೀಪ್ ನೊಂದಿಗೆ ಡೂಟಿ ಆರಂಭಿಸಿದ್ರು. ತಡರಾತ್ರಿ 1-30 ಕ್ಕೇ ಜೀಪ್ ಆಯ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.ಪೊಲೀಸ್ ಜೀಪ್ ತಡರಾತ್ರಿ 1.30ರಲ್ಲಿ ಅಪಘಾತವಾಗಿ ಮರಕ್ಕೇ ಡಿಕ್ಕಿ ಹೊಡಿದಿದ್ದು ಸ್ಥಳದಲ್ಲಿಯೇ ಹೆಡ್ ಕಾನ್ಸಟೇಬಲ್ ಹಾಗೂ ಎಎಸ್ ಐ ಗಳಿಬ್ಬರೂ ದುರ್ಮರಣವಾಗಿದ್ದಾರೆ.
ಅಪಘಾತದಲ್ಲಿ ಜೀಪ್ ನ ಮುಂಬಾಗ ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದ್ದು ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಠಾಣೆಯ ಇಬ್ಬರು ಸಿಬ್ಬಂದ್ದಿಗಳನ್ನು ಕಳೆದುಕೊಂಡ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ನೀರವ ಮೌನ ಆವರಿಸಿದ್ದು ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಕಂಡು ಬಂದಿತು. ವಿಷಯ ತಿಳಿದ ನಗರ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು.