ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರು – ಉಡಾಳತನ ಮಾಡಿ ಕಲ್ಲು ತೂರಿದ್ದ 9 ಯುವಕರ ಬಂಧನ…..

Suddi Sante Desk
ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರು – ಉಡಾಳತನ ಮಾಡಿ ಕಲ್ಲು ತೂರಿದ್ದ 9 ಯುವಕರ ಬಂಧನ…..

ಬೀದರ್

ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರು – ಉಡಾಳತನ ಮಾಡಿ ಕಲ್ಲು ತೂರಿದ್ದ 9 ಯುವಕರ ಬಂಧನ ಹೌದು ಜಾತ್ರೆ ಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮದ ಯುವಕರ ಮದ್ಯ ಗಲಾಟೆ ನಡೆದು ಗಲಾಟೆ ತಡೆಯಲು ಬಂದ‌ ಪೊಲೀಸ್ ವಾಹನದ ಮೇಲೆ ಯುವಕರ ಗುಂಪು ಕಲ್ಲು ತೂರಾಟ ಮಾಡಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಕಲ್ಲು ತೂರಾಟದಿಂದ‌ ಡಿಎಆರ್ ವಾಹನ ಜಖಂ ಆಗಿದೆ.ಘಟನೆಯಲ್ಲಿ ಇಬ್ಬರು ಪೊಲೀಸ್‌ ಪೇದೆ ಗಳು ಗಂಭೀರವಾಗಿ ಗಾಯಗೊಂಡಿದ್ದು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಮಹಾಲಕ್ಷ್ಮಿ ಪಲ್ಲಕ್ಕಿ ಉತ್ಸವದ ಮೆರ ವಣಿಗೆ ವೇಳೆ ಎರಡು ಗ್ರಾಮದ ಯುವಕರ ನಡುವೆ ಈ ಒಂದು ಗಲಾಟೆ ನಡೆದಿದೆ.

ಬಟಗೇರಾ ಹಾಗೂ ಬಟಗೇರಾ ತಾಂಡಾ ಯುವಕರ ಮದ್ಯ ಗಲಾಟೆ ನಡೆದಿದೆ.ಈ ವೇಳೆ ಸ್ಥಳಕ್ಕೆ ಬಂದು ಪೊಲೀಸ್ ವಾಹನದ ಮೇಲೂ ಕಲ್ಲು ತೂರಾಟ ಮಾಡಿದ ಯುವಕರು ಗುಂಪು.ಈ ಕುರಿತಂತೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 9 ಯುವಕರ ಮೇಲೆ ಎಫ್‌‌ಐಆರ್ ದಾಖಲು ಮಾಡಿಕೊಂಡಿದ್ದು ಶಂಕಿತ 9 ಯುವಕರನ್ನು ಬಂಧನ ಮಾಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೀದರ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.