ಕಲಬುರಗಿ –
ಇಬ್ಬರು ಪಿಎಸ್‌ಐ ಅಧಿಕಾರಿಗಳನ್ನು ಅಮಾನತು ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣದಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಸುಳಿವಿಗಾಗಿ ಯುವಕನೋರ್ವನನ್ನು ವಿಚಾರಣೆಗೊಳಪಡಿಸಿ

ತನಿಖೆ ವೇಳೆ ಪೊಲೀಸರಿಂದ ಕಿರುಕುಳ ಆರೋಪದಲ್ಲಿ ಇಬ್ಬರು ಪಿಎಸ್ ಐ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಚಿಂಚೋಳಿ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ್ ಮತ್ತು ಸುಲೇಪೇಟ ಠಾಣೆ ಪಿಎಸ್‌ಐ ಚೇತನ ಬಿದಿರಿ ಅಮಾನತು ಆದ ಅಧಿಕಾರಿಗಳಾಗಿದ್ದಾರೆ.

ಈ ಇಬ್ಬರು ಪೊಲೀಸ್ ಅಧಿಕಾರಿಗಳು ತನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆಂದು ಸಂಘಟನೆಯೊಂದಕ್ಕೆ ದೂರು ನೀಡಿದ್ದ ಯುವಕನೊಬ್ಬ. ನಂತರ ಸಂಘಟನೆಗಳ ಮುಖ್ಯಸ್ಥರು ಯುವಕನಿಗೆ ವಿನಾಕಾರಣ ಕಿರುಕುಳ ಖಂಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.

ಇದೀಗ ದೂರಿನ ಅನ್ವಯ ಇಬ್ಬರು ಪಿಎಸ್‌ಐಗಳನ್ನು ಅಮಾನತು ಮಾಡಲಾಗಿದೆ.ಇನ್ನೂ ಈ ಒಂದು ಪ್ರಕರಣದಲ್ಲಿ ಯಾರೋ ಮಾಡಿದ ತಪ್ಪಿಗೆ ಪೊಲೀಸರ ತಲೆದಂಡ ಸರಿನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.


ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್‌ಕುಮಾದ ಮೇಲೆ ಸದಸ್ಯ ಆನಂದ ಟೈಗರ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದರು. ನಕಲಿ ಬಿಲ್‌ಗಳಿಗೆ ಸಹಿ ಹಾಕುವಂತೆ ಅಧಿಕಾರಿ ಮೇಲೆ ಆನಂದ್ ಟೈಗರ್ ಒತ್ತಡ ಹಾಕಿದ್ದ ಅಕ್ರಮಕ್ಕೆ ಸಾಥ್ ನೀಡದಿದ್ದಕ್ಕೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದರು ಪುರಸಭೆ ಸದಸ್ಯ ಟೈಗರ್.

ಈ ಒಂದು ಪ್ರಕರಣದ ವಿಚಾರಣೆ ಮಾಡುವ ಸಮಯದಲ್ಲಿ ಸಂಶಯಾಸ್ಪದವಾಗಿ ಒರ್ವ ಯುವಕನನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿ ನಂತರ ಆ ಯುವಕ ಆರೋಪ ಮಾಡಿದ ಬೆನ್ನಲ್ಲೇ ಹಿಂದೆ ಮುಂದೆ ನೊಡದೇ ಹೀಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದು ಸರಿನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ಇನ್ನೂ ಮುಖ್ಯವಾಗಿ ಯಾರೋ ಮಾಡಿದ ತಪ್ಪಿಗಾಗಿ ಇನ್ಯಾರೋ ಬಲಿಯಾಗುತ್ತಿ ರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ.