ಬಾಗಲಕೋಟೆ –
ಕಾರು ಅಪಘಾತದಲ್ಲಿ ಐವರ ವಿದ್ಯಾರ್ಥಿನಿಯರ ಪೈಕಿ ಇಬ್ಬರು ಮೃತ ಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪ ನಡೆದಿದೆ.

ಐಹೊಳೆ ಗ್ರಾಮದಿಂದ ಶಾಲೆಮುಗಿಸಿಕೊಂಡು ಚಿಲ್ಅಪುರ ಗ್ರಾಮಕ್ಕೆ ತೆರಳುತ್ತಿದ್ದ ಐವರು ವಿದ್ಯಾರ್ಥಿನಿಯರಿಗೆ ಎದುರಿ ನಿಂದ ಬಂದ ಕಾರು ಗುದ್ದಿದೆ.ಪರಿಣಾಮ ಓರ್ವ ವಿದ್ಯಾ ರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನ ನೇತ್ರಾ ರಗಟಿ(13) ಎಂದು ಗುರುತಿಸ ಲಾಗಿದೆ.ಇನ್ನೋರ್ವ ವಿದ್ಯಾರ್ಥಿನಿ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನ ಅಂಜಲಿ ಸೂಡಿ(15) ಎಂದು ಗುರ್ತಿಸಲಾಗಿದೆ.
ಇನ್ನು ಗಾಯಗೊಂಡ ಮೂವರು ವಿದ್ಯಾರ್ಥಿನಿಯರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಅತೀ ವೇಗದಿಂದ ಬಂದ ಪರಿಣಾಮವಾಗಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಕಾರು ಗುದ್ದಿದ್ದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ಕಾರು ಚಾಲಕ ಪರಾರಿ ಯಾಗಿದ್ದಾನೆ.ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಈ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಐಹೊಳೆ ಪ್ರವಾಸದಲ್ಲಿದ್ದ ತೊಟಗಾರಿಕಾ ಸಚಿವ ಮುನಿರತ್ನ ಅವರು ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ರು ಅಪಘಾತಪಡಿಸಿದ ವಾಹನ ವಿವರವನ್ನು ಸಂಗ್ರಹಿಸಲು ಪೊಲೀಸರಿಗೆ ಸೂಚಿಸಿ ಸ್ಥಳದಲ್ಲಿದ್ದ ಕುಟುಂಬಸ್ಥರಿಗೆ ಸಾಂತ್ವನಹೇಳಿದ್ರು.ಇನ್ನು ಈ ಘಟನೆಯ ಕುರಿತು ಮೃತ ವಿದ್ಯಾರ್ಥಿನಿ ಅಂಜಲಿ ಸೂಡಿ(15) ಅವರ ಸಂಬಂಧಿ ಜಗದೀಶ ಗಟನೆಯ ಕುರಿತು ಮಾತನಾಡಿದ್ದು ಅಪಘಾತದ ಕುರಿತು ವಿವರಿಸಿ ಪೊಲೀಸರಿಗೆ ಮಾಹಿತಿ ನೀಡಿದರು.