ಮಂಗಳೂರು –
ಇಬ್ಬರು ಖೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರು ಘಟನೆ ಮಂಗಳೂರಿನಲ್ಲಿ ನಡೆದಿದೆ.ನಗರದ ಉಪ ಕಾರಾ ಗೃಹದಲ್ಲಿ ಈ ಒಂದು ಘಟನೆ ನಡೆದಿದ್ದು ಘಟನೆಯ ಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಖೈದಿಯೊಬ್ಬ ತನ್ನ ಸಹ ಖೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ.ಪಣಂಬೂರು ದರೋಡೆ ಪ್ರಕರಣದಲ್ಲಿ ಕಳೆದ ಜುಲೈನಿಂದ ಜೈಲಿನಲ್ಲಿರುವ ಸಮೀರ್ ಎಂಬಾತ ಹಲ್ಲೆ ಮಾಡಿರುವ ಖೈದಿಯಾಗಿದ್ದು ಮುಲ್ಕಿ ಪೊಲೀಸರಿಂದ ಬಂಧಿತರಾಗಿರುವ ಅನ್ಸಾರ್ ಹಾಗೂ ಮೂಡುಬಿದಿರೆ ದರೋಡೆ ಪ್ರಕರಣದಲ್ಲಿ ಬಂಧಿತರಾ ಗಿರುವ ಆರೋಪಿ ಝೈನುದ್ದೀನ್ ಮೇಲೆ ಸಮೀರ್ ಹಲ್ಲೆ ನಡೆಸಿದ್ದಾನೆ

ಇಬ್ಬರ ಮೇಲೆ ಸಮೀರ್ ಚಮಚ ಹಾಗೂ ಮತ್ತಿತ್ತರ ಪರಿಕರಗಳಿಂದ ಹಲ್ಲೆ ನಡೆಸಿದ್ದು, ಅನ್ಸಾರ್ ನ ತೋ ಳು ಮತ್ತು ಕಾಲಿಗೆ ಗಾಯವಾಗಿದೆ.ಝೈನು ದ್ದೀನ್ ನ ಭುಜ ಮತ್ತು ಬೆನ್ನಿಗೆ ಗಾಯವಾಗಿದೆ.ಘಟನೆ ಸಂಬಂ ಧ ಪೊಲೀಸರು ಪರಿಶೀಲನೆ ನಡೆಸಿದ್ದು ಹೆಚ್ಚಿನ ಭದ್ರ ತೆ ಒದಗಿಸಲಾಗಿದೆ