ಜೇವರ್ಗಿ –
ಸಾಮಾನ್ಯವಾಗಿ ಸಮಾಜದಲ್ಲಿ ಗುರುವಿಗೆ ದೊಡ್ಡ ಸ್ಥಾನ ಮಾನ ಇದೆ.ಇಡೀ ಸಮಾಜಕ್ಕೆ ಇವರೇ ಅಕ್ಷರ ಗಳನ್ನು ಬಿತ್ತುವವರು ತಪ್ಪುಗಳಾದಾಗ ತಿದ್ದಿ ಬುದ್ದಿ ಹೇಳುವವರು ಹೌದು ಆದರೆ ಇವರೇ ತಪ್ಪು ಮಾಡಿ ದರೆ ಹೇಗೆ ಹೌದು ಕಾಗುಣಿತ ದೋಷಗಳಿಂದ ಪತ್ರ ವನ್ನು ಬರೆದ ಇಬ್ಬರು ಶಿಕ್ಷಕರು ಈಗ ತಪ್ಪು ಮಾಡಿ ಸೇವೆಯಿಂದ ಅಮಾನತುಗೊಂಡಿದ್ದಾರೆ.
ಗುಲಬುರ್ಗಾ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಬೋಳದ ಇಬ್ಬರು ಶಿಕ್ಷಕರಿಗ ಮಾಡಿದ ತಪ್ಪಿಗಾಗಿ ಈಗ ಸೇವೆ ಯಿಂದ ಅಮಾನತುಗೊಂಡಿದ್ದಾರೆ. ಯಾವುದೇ ಒಂದು ವಿಚಾರದಲ್ಲಿ ಈ ಒಂದು ಶಾಲೆಯ ಶಿಕ್ಷಕ ಸುಭಾಷ್ ಚಂದ್ರ ಹಾಗೇ ಶ್ರೀಮತಿ ಸುಧಾ ಪರಿಮಳ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರವನ್ನು ಬರೆದಿ ದ್ದಾರೆ.
ಈ ಒಂದು ಪತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಗುಣಿತದಿಂದ ಕೂಡಿದ ಪತ್ರ ಕಂಡು ಬಂದಿದೆ.ಚಿಕ್ಕ ಪುಟ್ಟ ಅಕ್ಷರಗಳನ್ನು ಬರೆದು BEO ಅವರಿಗೆ ನೀಡಿ ದ್ದಾರೆ. ಇಬ್ಬರು ಶಿಕ್ಷಕರು ಬರೆದ ಪತ್ರವನ್ನು ನೋಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಪ್ಪು ತಪ್ಪಾಗಿ ಬರೆದ ಮಾಹಿತಿಯೊಂದಿಗೆ ಇಬ್ಬರಿಗೆ ಅಮಾನತುಶಿಕ್ಷೆಯನ್ನು ನೀಡಿದ್ದಾರೆ.
ಸಧ್ಯ ಇಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶವನ್ನು ಮಾಡಿದ್ದಾರೆ.ವೃತ್ತಿಯಲ್ಲಿ ಶಿಕ್ಷಕ ಶಿಕ್ಷಕಿ ಯ ಸ್ಥಾನದಲ್ಲಿದ್ದುಕೊಂಡು ಎಲ್ಲವೂ ಗೊತ್ತಿದ್ದರೂ ಕೂಡಾ ತಪ್ಪು ತಪ್ಪಾಗಿ ಬರೆದಿದ್ದಕ್ಕೆ BEO ಅವರು ಶಿಕ್ಷೆಯನ್ನು ನೀಡಿ ಮನೆಯ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ.ಒಟ್ಟಾರೆ ಏನೇ ಆಗಲಿ ಶಿಕ್ಷಕರಾದವರು ಹೀಗೆ ಮಾಡಿದ್ದು ನಿಜಕ್ಕೂ ಕೂಡಾ ದುರಂತದ ವಿಚಾರವೇ ಇವರೇ ಹೀಗ ಮಾಡಿದರೆ ಇನ್ನೂ ಮಕ್ಕಳಿಗೆ ಏನು ಕಲಿಸುತ್ತಾರೆ ಎಂಬ ಪ್ರಶ್ನೆ ಈ ಒಂದು ಸಾಕ್ಷಿಯಿಂದ ಕಂಡು ಬರುತ್ತಿದೆ