ಉಡುಪಿ –
ದೇಶದೆಲ್ಲೆಡೆ ಈಗ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಮಹಾಮಾರಿ ಕೋವಿಡ್ ಆರ್ಭಟ.ಇಂತಹ ಪರಿಸ್ಥಿತಿ ಯ ನಡುವೆ ಇದನ್ನು ನಿಯಂತ್ರಣ ಮಾಡಲು ದೇಶ ದ ಪ್ರಧಾನಿ ಇಂದ ಹಿಡಿದು ಎಲ್ಲರೂ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು ಇದರ ಒಂದು ನಿಯಂ ತ್ರಣಕ್ಕಾಗಿ ರಾತ್ರಿ ಕರ್ಫ್ಯೂ,ವಾರಾಂತ್ಯ ಕರ್ಫ್ಯೂ ಹಾ ಗೂ ನಿಷೇದಾಜ್ನೆ ಜಾರಿ ಮಾಡಿದ್ದಾರೆ. ಹೀಗಿರುವಾಗ ಉಡುಪಿಯಲ್ಲಿ ಜಿಲ್ಲಾಧಿಕಾರಿ ಇದರ ಉಲ್ಲಂಘನೆ ಮಾಡಿದ್ದು ಎರಡು ಪ್ರಮುಖ ಪ್ರಕರಣಗಳು ಸಾರ್ವ ಜನಿಕ ವಲಯದಲ್ಲಿ ಚರ್ಚೆಗೊಳಗಾಗುತ್ತಿವೆ.
ಸ್ವತಃ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೇ ಎಎಸ್ ಪಿ ಮಗಳ ಮದುವೆಯ ಮೆಹಂದಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಮಾಸ್ಕ್ ಇಲ್ಲ ದೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಎಂಬ ಟೀಕೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಮತ್ತೊಂದು ಪ್ರಕರಣ ಅಂದ್ರೆ ನ್ಯಾಯಾಲಯದ ಆವರಣದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿ ಸಿ ನೂರಾರು ಜನರಿಗೆ ಭೋಜನ ವ್ಯವಸ್ಥೆ ಮಾಡಲಾ ಗಿತ್ತು ಎಂಬ ಆರೋಪ ಕೇಳಿ ಬಂದಿದೆ
ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಿ. ಜಗದೀ ಶ್ ಅವರು ಈ ಪ್ರಕರಣದಲ್ಲಿ ಕರ್ತವ್ಯಲೋಪ ಮಾಡಿದ ಅಧಿಕಾರಿಗೆ ನೋಟಿಸ್ ನೀಡಿದ್ದೇವೆ. ಅಲ್ಲದೇ ಸಂಬಂಧಪಟ್ಟ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಜಿಲ್ಲಾಡಳಿತ ಬಡವರ ಅಂಗಡಿಗಳನ್ನು ನಿರ್ದಾಕ್ಷಿಣ್ಯ ವಾಗಿ ಮುಚ್ಚಿಸಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಇಂಥ ಪ್ರಕರಣಗಳಿಂದ ಬಡವರಿ ಗೊಂದು ಕಾನೂನು, ಸಿರಿವಂತರಿಗೆ ಒಂದು ಕಾನೂ ನು ಎಂಬ ಸಂದೇಹ ಬರುತ್ತದೆ ಎಂದು ಟೀಕಿಸಿದ್ದಾರೆ