ಹುಬ್ಬಳ್ಳಿ –
ಸಾಮಾನ್ಯವಾಗಿ ಯಾವುದೇ ಒಂದು ಕೆಲಸ ಕಾರ್ಯವನ್ನು ಮಾಡಬೇಕೆಂದರೆ ದೊಡ್ಡ ಹರ ಸಾಹಸದ ಮಾತು.ಅದರಲ್ಲೂ ರೈಲ್ವೆ ಅಂಡರ್ ಪಾಸ್ ಕೆಲಸ ಎಂದರೆ ತಿಂಗಳು ವರ್ಷಗಟ್ಟಲೇ ಬೇಕೆ ಬೇಕು ಕೆಲಸ ಮಾಡೊದು ಒಂದು ವಿಚಾರ ವಾದರೆ ಇನ್ನೂ ಈ ಒಂದು ಕೆಲಸದಿಂದ ಸಾರ್ವ ಜನಿಕರ ಪರದಾಟ ತೊಂದರೆ ನರಕಯಾತನೆ ಅನುಭವಿಸೊದು ಮತ್ತೊಂದು ಕಷ್ಟ.
ಇದನ್ನೇಲ್ಲವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕ್ಷೇತ್ರದಲ್ಲಿನ ಕೆಲಸವನ್ನು ಕಡಿಮೆ ಸಮಯದಲ್ಲಿ ಮಾಡಿಸುವ ಮೂಲಕ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ ಹೌದು ಕೇವಲ ಏಳು ದಿನದಲ್ಲಿ ರೈಲ್ವೆ ಸೇತುವೆಯ ಅಂಡರ್ ಪಾಸ್ ಕಾಮರಾಗಿರಿಯನ್ನು ಮಾಡಿಸಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಧ್ಯದ ನವಲೂರಿನ ಎಲ್ ಸಿ ಗೇಟ್ ನಂಬರ್ 292 ರ ಬಳಿಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಯನ್ನು ಅಂದುಕೊಂ ಡಂತೆ ಕ್ಷಿಪ್ರಗತಿಯಲ್ಲಿ ಪೂರ್ಣ ಗೊಳಿಸಲಾಗಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕಾಮಗಾರಿ ಯನ್ನು ಬೇಗನೇ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಇಲಾಖೆಯ ಅಧಿಕಾರಿ ಗಳಿಗೆ ಕೋರಿಕೆ ಮಾಡಿದ್ದರು.ಸಚಿವರ ಸೂಚನೆ ಯಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಡಿಸಿ ತೋರಿಸಿದ್ದಾರೆ.
ಇದೇ ತಿಂಗಳ ಡಿಸೆಂಬರ್ 4ರಂದು ಕಾಮಗಾರಿ ಆರಂಭಿಸಿ ಈಗ ಪೂರ್ಣವಾಗಿ ಪೊರೈಸಿ ಮುಕ್ತಾ ಯಗೊಳಿಸಲಾಗಿದೆ ಕೇವಲ ಏಳು ದಿನಗಳಲ್ಲಿ ಈ ಕೆಲಸ ಮುಗಿಸಿದ ನೈರುತ್ಯ ರೈಲ್ವೆಯ ಸಿಬ್ಬಂದಿ ವರ್ಗದ ಕಾರ್ಯವನ್ನು ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿಯವರು ಶ್ಲಾಘಿಸಿದ್ದಾರೆ.ಇನ್ನೂ ಈ ಕಾರ್ಯಕ್ಕೆ ಕಾರಣೀಭೂತರಾದ ರೈಲ್ವೇ ಸಚಿವ ಅಶ್ವೀನ್ ವೈಷ್ಟವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿ ಇನ್ನೂ ಹಾಗೇ ಶೀಘ್ರವಾಗಿ ಪೂರ್ತಿಗೊಳ್ಳು ತ್ತಿರುವ ಕಾಮಗಾರಿಗಳು ಹಾಗೂ ಯೋಜನೆಗಳಿಗೆ ಕಾರಣಿಕರ್ತರಾದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..