ದಾವಣಗೆರೆ –
ನೂತನ ಜಿಲ್ಲಾಧ್ಯಕ್ಷ ವಿರೇಶ್ ಓಡೆನಪುರ ಸನ್ಮಾನ ಗೌರವ – ಮಾಲತೇಶ್ ಬಬ್ಬಜ್ಜಿಯವರ ನೇತ್ರತ್ವದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಸರ್ಕಾರಿ ನೌಕರರ ಸಂಘದಿಂದ ನಡೆಯಿತು ಸನ್ಮಾನ ಗೌರವ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ ವಿರೇಶ್ ಓಡೆನಪುರ ಆಯ್ಕೆಯಾಗಿದ್ದಾರೆ.ಹೌದು ನೂತನವಾಗಿ ಜಿಲ್ಲಾಧ್ಯಕ್ಷ ರಾಗಿ ಆಯ್ಕೆಯಾದ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. ನೂತನ ಜಿಲ್ಲಾ ಅಧ್ಯಕ್ಷರನ್ನು ದಾವಣಗೆರೆಯಲ್ಲಿ ಸನ್ಮಾನಿಸಿ ಗೌರವಿ ಸಲಾಯಿತು
.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನೆಯ ನಿಕಟಪೂರ್ವ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಲತೇಶ್ ಬಬ್ಬಜ್ಜಿ ಯವರ ನೇತ್ರತ್ವದಲ್ಲಿ ಹೊಸ ಜಿಲ್ಲಾಧ್ಯಕ್ಷರಿಗೆ ಸನ್ಮಾನಿಸ ಲಾಯಿತು.ಇದೇ ವೇಳೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಲಾಯಿತು.ಇನ್ನೂ ಈ ಒಂದು ಸಂದರ್ಭ ದಲ್ಲಿ ದಾವಣಗೆರೆಯ ಕ.ರಾ.ಪ್ರಾ.ಶಾ.ಶಿ.ಸಂಘದ ಗೌರವಾಧ್ಯಕ್ಷರಾದ ಸಿದ್ದೇಶ್,ಕ.ರಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶರಣಕುಮಾರ್ ಹೆಗಡೆ,
ಕ.ರಾ.ಪ್ರಾ.ಶಾ.ಶಿ.ಸಂಘ ಹರಿಹರದ ಖಜಾಂಚಿಗಳಾದ ಗಿರೀಶ್ ಮತ್ತು ಸರ್ಕಾರಿ ನೌಕರರ ಸಂಘ ಹರಿಹರ ಕ.ರಾ.ಪ್ರಾ.ಶಾ.ಶಿ.ಸಂಘ ಹರಿರಹ ಘಟಕದ ಮಂಜಪ್ಪ ಬಿದರಿ,ಮಲ್ಲಿಕಾರ್ಜುನ ಆರ್.ಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ದಾವಣಗೆರೆ…..