ನವದೆಹಲಿ –
ದೇಶದ ಜನತೆಗೆ ಈವರೆಗೆ ಕರೋನ ಲಸಿಕೆ ಸಿಕ್ಕಿದೆ ಇಲ್ಲೋ ಗೊತ್ತಿಲ್ಲ ಆದರೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಹಾಗೇ ತುಂಬಾ ಆತಂಕದಲ್ಲಿರುವ ದೇಶದ ಶಿಕ್ಷಕರ ಸಮುದಾಯಕ್ಕೆ ಸೆಪ್ಟೆಂಬರ್ 5 ರ ಒಳಗಾಗಿ ಕರೋನ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ.ದೇಶದ ಎಲ್ಲಾ ರಾಜ್ಯಗಳಿಗೆ ಶಿಕ್ಷಕರ ದಿನಾಚರಣೆಗೆ ಮೊದಲು ಎಲ್ಲಾ ಶಿಕ್ಷಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಿ ವರದಿ ಸಲ್ಲಿಸು ವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.ಶಿಕ್ಷಕರಿಗೆ ಲಸಿಕೆ ನೀಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ ಸುಖ್ ಮಾಂಡವೀಯಾ ತಿಳಿಸಿದ್ದಾರೆ.
ಶಿಕ್ಷಕರಿಗೆ ಲಸಿಕೆ ನೀಡಲು 2 ಕೋಟಿಗೂ ಅಧಿಕ ಹೆಚ್ಚುವರಿ ಲಸಿಕೆಯನ್ನು ಈಗಾಗಲೇ ರಾಜ್ಯಗಳಿಗೆ ಪೂರೈಕೆ ಮಾಡಲಾಗಿದೆ.ದೇಶದಲ್ಲಿ ಕೊರೋನಾ ಸಂಖ್ಯೆ ಇಳಿಮುಖವಾಗುತ್ತಿದ್ದು ಶಾಲೆ- ಕಾಲೇಜು ಗಳನ್ನು ಆರಂಭಿಸಲಾಗಿದೆ ಈ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಲಸಿಕೆ ನೀಡಲು ಸೂಚನೆ ನೀಡಲಾಗಿದೆ ಎಂದರು.