ಬೆಂಗಳೂರು –
ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಿಳಿದಿದ್ದಾರೆ ಹೌದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿ ರುವ ಖೇಲೊ ಇಂಡಿಯಾ -2021 ಯುನಿವರ್ಸಿಟಿ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಇಂದು ವಿಶೇಷ ವಿಮಾನದ ಮೂಲಕ ನಗರದ ಹೆಚ್.ಎ. ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,ರಾಜ್ಯ ಸಚಿವರು ಗಳಾದ ಅರಗ ಜ್ಞಾನೇಂದ್ರ,ಗೋವಿಂದ ಎಮ್ ಕಾರಜೋಳ ನಾರಾಯಣ ಗೌಡ,ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇನ್ನೂ ನಗರಕ್ಕೆ ಆಗಮಿಸುತ್ತಿದ್ದಂತೆ ನಗರದ ಬಿಜೆಪಿ ಕಚೇರಿ ಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಗೊಂಡಿದ್ದು ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸೇರಿ ದಂತೆ ಸಚಿವ ಸಂಪುಟದ ವಿಸ್ತರಣೆ ಹೀಗೆ ಹಲವಾರು ವಿಚಾರ ಕುರಿತಂತೆ ರಾಜಕೀಯ ಚಟುವಟಿಕೆಗಳು ಚುರು ಕುಗೊಂಡಿದ್ದು ಏನೇನು ಆಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.