ಧಾರವಾಡ –
ಭಕ್ತರಿಗೆ ಉಚಿತವಾಗಿ ಮಜ್ಜಿಗೆ ನೀಡಿ ಅಪ್ಪನ ಜಾತ್ರೆ ಮಾಡಿದ ನಿತಿನ ಇಂಡಿ – ಅರ್ಥಪೂರ್ಣ ನಿತಿನ ಇಂಡಿಯವರ ಕಾರ್ಯಕ್ರಮಕ್ಕೆ ಸಾಕ್ಷಿ ಯಾದ್ರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಶಾಸಕಿ ಸೀಮಾ ಮಸೂತಿ…..ಬಿಸಿಲಿನ ಬೇಗೆಯ ನಡುವೆ ಕೂಲ್ ಕೂಲ್ ಆದ್ರು ಭಕ್ತರು
ಹೌದು ಧಾರವಾಡದ ಐತಿಹಾಸಿಕ ಮುರುಘಾ ಮಠದ ಜಾತ್ರೆ ಸಡಗರ ಸಂಭ್ರಮದಿಂದ ಜರುಗಿತು.ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮುರುಘಾಮಠದ ಜಾತ್ರೆ ಅತಿ ವಿಜೃಂಬ ಣೆಯಿಂದ ನೆರವೇರಿತು.ಇನ್ನೂ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು ಜಾತ್ರೆಗೆ ಬರುವ ಭಕ್ತಾಧಿ ಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿತಿನ್ ಇಂಡಿ ಮಜ್ಜಿಗೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಹೌದು ಬಿಸಿಲಿನ ತಾಪದಲ್ಲಿ ಅಪ್ಪನ ಜಾತ್ರೆಗೆ ಬಂದವರಿಗೆ ತಂಪು ತಂಪು ಕೂಲ್ ಕೂಲ್ ಮಾಡಿದ್ದಾರೆ ಪಾಲಿಕೆಯ ಸದಸ್ಯ ನಿತಿನ ಇಂಡಿ. ಒಂದು ಕಡೆಗೆ ಜಾತ್ರೆಯ ಸಡಗರ ಸಂಭ್ರಮ ಮತ್ತೊಂದೆಡೆ ನೆತ್ತಿ ಸುಡುವ ಬಿಸಿಲಿನ ತಾಪ ಈ ಒಂದು ಬಿಸಿಲಿನ ತಾಪದಲ್ಲಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ನಿತಿನ ಇಂಡಿಯವರು ಮಜ್ಜಿಗೆ ವಿತರಣೆ ಮಾಡಿದರು.
ಸದಾ ಒಂದಿಲ್ಲೊಂದು ವಿಶೇಷವಾದ ಕಾರ್ಯಗಳ ಮೂಲಕ ಜನರ ಸೇವೆಯನ್ನು ಮಾಡುತ್ತಿರುವ ಯುವ ಮುಖಂಡರು ವಾರ್ಡ್ ನಂಬರ್ 5 ರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾಗಿರುವ ನಿತಿನ ಇಂಡಿಯವರು ಜಾತ್ರೆಯ ಹಿನ್ನಲೆಯಲ್ಲಿ ಈ ಒಂದು ಮಜ್ಜಿಗೆ ಯನ್ನು ವಿತರಣೆ ಮಾಡಿದರು.
ಮದಥಣಿ ಮುರುಘೇಂದ್ರ ಮಹಾಶಿವಯೋಗಿ ಗಳವರ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ನಿತಿನ ಇಂಡಿಯವರು ತಮ್ಮ ಪರಿವಾರದೊಂದಿಗೆ ಈ ಒಂದು ಸೇವೆಯನ್ನು ಆಯೋಜಿಸಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಜಿ ಶಾಸಕಿ ಸೀಮಾ ಮಸೂತಿ ಮಜ್ಜಿಗೆ ವಿತರಣೆಗೆ ಚಾಲನೆ ನೀಡಿದರು
ನೆತ್ತಿ ಸುಡುವ ಬಿಸಿಲಿನ ತಾಪದಿಂದ ಬೇಸತ್ತ ಭಕ್ತಾಧಿಗಳಿಗೆ ಕೂಲ್ ಕೂಲ್ ಮಾಡುತ್ತಾ ವಿಶೇಷವಾದ ಸೇವಯನ್ನು ಮಾಡಿದರು.ಡಿಪೋ ಸರ್ಕಲ್ ನಲ್ಲಿ ಈ ಒಂದು ವಿತರಣೆಯನ್ನು ಮಾಡಲು ಮುಂದಾಗಿದ್ದು ಅಪ್ಪನ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನಿತಿನ ಇಂಡಿಯವರಿಂದ ಉಚಿತವಾಗಿ ಮಜ್ಜಿಗೆ ಸೇವೆ ಸಿಕ್ಕಿತು.
ಒಳ್ಳೇಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಮಹಾನಗರ ಪಾಲಿಕೆಯ ಸದಸ್ಯ ನಿತಿನ ಇಂಡಿ ಯವರಿಗೆ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳು ಸ್ವಾಮಿಜಿಯ ಕೃಪೆಯಿಂದ ಈಗಾಗಲೇ ಜನಪ್ರತಿನಧಿಯಾಗಿದ್ದು ಹೀಗಾಗಿ ಸಧ್ಯ ಜಾತ್ರೆಯ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ತಮ್ಮ ಅಭಿಮಾ ನಿಗಳೊಂದಿಗೆ ಎಲ್ಲದಕ್ಕಿಂತ ಹೆಚ್ಚಾಗಿ ಕುಟುಂಬದ ಸದಸ್ಯರೊಂದಿಗೆ ಸೇರಿಕೊಂಡು ಈ ಒಂದು ಮಜ್ಜಿಗೆ ವಿತರಣೆಯನ್ನು ಮಾಡಿದರು.
ಬಿಸಿಲಿನ ಬೇಗೆಯ ನಡುವೆ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಒಳ್ಳೇಯ ಗುಣಮಟ್ಟದ ಮಜ್ಜಿಗೆ ಯನ್ನು ನೀಡಿ ತಂಪು ಮಾಡುತ್ತಾ ಅಪ್ಪನ ಜಾತ್ರೆಯನ್ನು ವಿಶೇಷವಾಗಿ ಭಕ್ತಿಯ ಸೇವೆಯ ಮೂಲಕ ಮಾಡಿದ್ದು ಕಂಡು ಬಂದಿತು.ನಿತಿನ ಇಂಡಿಯವರ ಈ ಒಂದು ಮಜ್ಜಿಗೆ ವಿತರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..