ಧಾರವಾಡ –
ಧಾರವಾಡದ ಹೆಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಸುಸಜ್ಜಿತ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡೊದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ ಅವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 55 ನಂದಘರ್ ಮಾದರಿ ಅಂಗನವಾಡಿ ಕೇಂದ್ರ ಮಾಡೊದಾಗಿ ಹೇಳಿದ್ದಾರೆ
ಹೌದು ಅಂಗನವಾಡಿ ಕಟ್ಟಡ ನಿರ್ಮಿಸಿಕೊಡಲು ಆಗ್ರಹಿಸಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಪಾಲಕರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ ವಿಷಯ ಪತ್ರಿಕೆಯಲ್ಲಿ ಬಂದ ವರದಿಯನ್ನು ದೆಹಲಿಯಲ್ಲಿ ಗಮನಿಸಿದ್ದೇನೆ ಹಾಗೂ ಸ್ಥಳೀಯ ಶಾಸಕ ರಾದ ಅಮೃತ ದೇಸಾಯಿ ಅವರೊಂದಿಗೆ ಮಾತನಾಡಿ ಅಂಗನವಾಡಿ ಕಟ್ಟಡಕ್ಕೆ ಅನುದಾನ ಒದಗಿಸಲು ಕೋರಿ ಕೊಂಡಿದ್ದು ಅದರಂತೆ ಕೂಡಲೇ ಎನ್.ಎಂ.ಡಿ.ಸಿ. (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇ ಷನ್) ಸಿ.ಎಸ್.ಆರ್. ಅಡಿ ಜಿಲ್ಲೆಯಲ್ಲಿ ಹೆಬ್ಬಳ್ಳಿ ಗ್ರಾಮ ದಲ್ಲಿ ೧೨.೫ ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ ಅದನ್ನು ನಂದಘರ್ ಆಗಿಸಲು ವೇದಾಂತ ಕಂಪನಿಗೂ ಕೂಡಾ ಕೋರಲಾಗಿದ್ದು ಅವರು ಸಹ ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು
ಕಟ್ಟಡವು ಪೂರ್ಣಗೊಂಡ ಕೂಡಲೇ ಅದನ್ನು ಒಂದು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ವೇದಾಂತ ಕಂಪನಿಯ ನಂದಘರ್ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಮಕ್ಕಳಲ್ಲಿ ಅಪೌ ಷ್ಟಿಕತೆ ನಿವಾರಣೆ ಉದ್ದೇಶ ಪ್ರಮುಖವಾಗಿದ್ದರೆ,ಮಹಿಳಾ ಸಬಲೀಕರಣ ಮತ್ತೊಂದು ಮಹತ್ವದ ಚಿಂತನೆಯಾಗಿದೆ ಈ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತ ಹಾಗೂ ತಾಲೂ ಕಾಡಳಿತ ನಿವೇಶನದ ವ್ಯವಸ್ಥೆ ಮಾಡಲು ಕೋರಲಾಗಿದೆ ಎಂದ ಸಚಿವ ಜೋಶಿಯವರು ತಿಳಿಸಿದ್ದಾರೆ.
ಎನ್. ಎಂ. ಡಿ. ಸಿ.ಕಂಪನಿಯ ಸಿ. ಎಸ್. ಆರ್.ಯೋಜನೆ ಅಡಿ ಒಟ್ಟು ೧೦ ಅಂಗನಾವಾಡಿಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲು ಒಪ್ಪಿಗೆ ಇತ್ತಿದ್ದು, ಇವುಗಳನ್ನು ನಂದಘರ್ ಮಾಡುವ ಉದ್ದೇಶ ಹೊಂದಲಾಗಿದೆ.ಕಟ್ಟಡ ಕೆಲಸ ಪ್ರಗತಿಯಲ್ಲಿದ್ದು,ನಿರ್ಮಿತಿ ಕೇಂದ್ರದವರಿಗೆ ಜಿಲ್ಲಾಧಿಕಾ ರಿಗಳ ಮೂಲಕ ಆದೇಶಿಸಲಾಗಿದೆ. ಮೂರು ತಿಂಗಳ ಒಳಗಾಗಿ ಕಟ್ಟಡ ನಿರ್ಮಿಸಿ ನೂತನ ಅಂಗನವಾಡಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದೂ ಜೋಶಿಯವರು ಪ್ರಕಟಣೆಯಲ್ಲಿ ತಿಳಿಸಿದರು
ನಂದಗರ್‌ನಲ್ಲಿ ಸೌರಶಕ್ತಿಯಾಧಾರಿತ ವಿದ್ಯುತ್ ವ್ಯವಸ್ಥೆ, ಹೀಟರ್,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಶೌಚಾಲಯ, ಕಂಪ್ಯೂಟರ್ ವ್ಯವಸ್ಥೆ, ಸ್ಮಾರ್ಟ್ ಕಿಟ್‌ಗಳು, ಮಕ್ಕಳಿಗೆ ಪೌಷ್ಟಿಕಾಂಶ ಗಳನ್ನೊಳಗೊಂಡ ಶುಚಿ- ರುಚಿ ಯಾದ ಆಹಾರ,ಆಟಿಕೆ ಸಾಮಗ್ರಿಗಳು ಹೀಗೆ ವಿವಿಧ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ.ನಂದ ಘರ್ ನಲ್ಲಿ ೩ರಿಂದ ೬ ವರ್ಷದೊಳಗಿನ ಮಕ್ಕಳಿಗೆ ಅತ್ಯುತ್ತಮ ಸೌಲಭ್ಯಗಳ ಜತೆಗೆ ಪೌಷ್ಟಿಕ ಆಹಾರ ದೊರೆಯುತ್ತದೆ. ಗರ್ಭಿಣಿ ಹಾಗೂ ನಿಶಕ್ತ ಮಹಿಳೆಯರಿಗೂ ಪೌಷ್ಟಿಕ ಆಹಾರ ಇನ್ನಿತರ ಸಾಮಗ್ರಿ ನೀಡಿಕೆ ಕಾರ್ಯ ನಡೆಯಲಿದೆ. ಮಕ್ಕ ಳಿಗೆ ಪೂರ್ವ ಪ್ರಾಥಮಿಕ ಹಂತದಿಂದ ಕಂಪ್ಯೂಟರ್ ಆಧಾ ರಿತ ಕಲಿಕೆ ಕೈಗೊಳ್ಳಲಾಗುತ್ತಿದೆ. ರೈಮ್ಸ್ ಗಳನ್ನು ವಿಡಿಯೋ ಮೂಲಕ ಕಂಪ್ಯೂಟರ್‌ನಲ್ಲಿ ಮಕ್ಕಳಿಗೆ ಕಲಿಸಲಾಗುತ್ತದೆ. ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಆರಂಭಿಕ ಹಂತದಿಂದಲೇ ಮಕ್ಕಳಿಗೆ ಇ-ಕಲಿಕೆ ಪರಿಚಯ, ಜ್ಞಾನ ದೊರೆತಂತಾಗಲಿದೆ.ಮುಂದಿನ ಹಂತದಲ್ಲಿ ತಂತ್ರಜ್ಞಾ ನಾಧಾರಿತ ಕಲಿಕೆಗೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳು ತ್ತಾರೆ ಹಾಗೂ ಅರ್ಥಮಾಡಿಕೊಳ್ಳುತ್ತಾರೆ ಎಂಬ ಆಶಯ ದೊಂದಿಗೆ ಈಗಾಗಲೇ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ೫೫ ನಂದಘರ್ ಕಾರ್ಯಾರಂಭ ಮಾಡಿದೆ ಎಂದು ಸಚಿವ ಜೋಶಿಯವರು ಹೇಳಿದ್ದಾರೆ.
ಮಕ್ಕಳಿಗೆ ಪೌಷ್ಟಿಕತೆ, ಮಹಿಳಾ ಸಬಲೀಕರಣ ಉದ್ದೇಶ ದೊಂದಿಗೆ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯಲ್ಲಿ ೫೫ ನಂದಘರ್ ಕಾರ್ಯಾರಂಭ ಮಾಡಲಾಗಿದೆ.ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ ಮಾರ್ಗದರ್ಶನದಂತೆ ಕೈಗೊಳ್ಳಲಾಗುತ್ತದೆ.ಕನಿಷ್ಟ ೭೮೦ ಚದರ ಅಡಿಯಲ್ಲಿ ನಂದಘರ್ ನಿರ್ಮಾಣ ಕೈಗೊಳ್ಳಲಾಗು ತ್ತಿದ್ದು, ಭೂಕಂಪಕ್ಕೂ ಜಗ್ಗದ ರೀತಿಯ ಅತ್ಯಾಧುನಿಕ ರೀತಿಯ ವ್ಯವಸ್ಥೆ ಇದಾಗಿರುತ್ತದೆ. ಯುನಿಸೆಫ್ ಪರಿಕಲ್ಪ ನೆಯ ಕಲಿಕೆಗಾಗಿ ಕಟ್ಟಡದ ನೆರವು ಆಧಾರದಲ್ಲಿ ಇದನ್ನು ರೂಪಿಸಲಾಗುತ್ತಿದೆ.
ಗ್ರಾಮೀಣ ಮಹಿಳೆಯರಲ್ಲಿ ಅನೇಕ ಕೌಶಲ್ಯಗಳಿದ್ದರೂ ಅವುಗಳಿಗೆ ಸೂಕ್ತ ವೇದಿಕೆ ಇಲ್ಲ ಇನ್ನಷ್ಟು ಕೌಶಲ್ಯದ ಅವಶ್ಯಕತೆಯನ್ನು ಮನಗಂಡೇ ವೇದಾಂತ ಕಂಪೆನಿ ಈ ಕಾರ್ಯಕ್ಕೆ ಮುಂದಾಗಿದೆ. ನಂದ ಘರ್ ಇರುವ ಗ್ರಾಮಗ ಳಲ್ಲಿ ಮಹಿಳಾ ಕಮೀಟಿ ಗಳನ್ನು ಮಾಡಲಾಗಿದ್ದು ಇ-ಕಲಿಕೆ ನೀಡಲಾಗುತ್ತದೆ.ಮುಂದಿನ ದಿನಗಳಲ್ಲಿ ಸ್ತ್ರೀ ಶಕ್ತಿ ಸ್ವಸಹಾ ಯ ಗುಂಪುಗಳ ರಚನೆ ಆ ಮೂಲಕ ಮಹಿಳೆಯರಿಂದ ವಿವಿಧ ಉತ್ಪನ್ನಗಳ ತಯಾರು ಅವುಗಳಿಗೆ ಮಾರುಕಟ್ಟೆ, ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಸುವ ಮಹದಾಸೆಯಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದೂ ಸಚಿವ ಜೋಶಿಯವರು ತಿಳಿಸಿದ್ದಾರೆ.
ಇನ್ನೂ ಕ್ಷೇತ್ರದಲ್ಲಿನ ಸಮಸ್ಯೆ ಕುರಿತು ಶಾಸಕ ಅಮೃತ ದೇಸಾಯಿ ಕೂಡಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಗಮನಕ್ಕೆ ತಗೆದುಕೊಂಡು ಬಂದರು ಕೂಡಲೇ ಕೇಂದ್ರ ಸಚಿವರು ಶಾಸಕರ ಮನವಿ ಗೆ ಸ್ಪಂದಿಸಿದ್ದು ಅವರ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು ಅಭಿನಂದನೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು
ವರದಿ ಚಂದ್ರಶೇಖರ ಮಾನ್ಯ ಸಚಿವರ ಆಪ್ತ ಸಹಾಯಕರು (ಮಾದ್ಯಮ)