ನಾಚಿಕೆ ಮಾನ ಮರ್ಯಾದೆ ಬುದ್ಧಿ ಇದೆಯಾ ಎಂದು ಕಾಂಗ್ರೇಸ್ ಪಕ್ಷದವರಿಗೆ ಪ್ರಶ್ನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಓಡಿ ಹೋದ ಉದ್ಯಮಿಗಳ ಓಡಿ ಹೋದ ವಂಚಕರ ಆಸ್ತಿಯನ್ನು ವಶಪಡಿಸಿಕೊಳ್ಳುವ ಹೊಸ ಕಾನೂನನ್ನು ತರಲಾಗಿದೆ ಎಂದ ಕೇಂದ್ರ ಸಚಿವರು…..

Suddi Sante Desk
ನಾಚಿಕೆ ಮಾನ ಮರ್ಯಾದೆ ಬುದ್ಧಿ ಇದೆಯಾ ಎಂದು ಕಾಂಗ್ರೇಸ್ ಪಕ್ಷದವರಿಗೆ ಪ್ರಶ್ನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಓಡಿ ಹೋದ ಉದ್ಯಮಿಗಳ ಓಡಿ ಹೋದ ವಂಚಕರ ಆಸ್ತಿಯನ್ನು ವಶಪಡಿಸಿಕೊಳ್ಳುವ ಹೊಸ ಕಾನೂನನ್ನು ತರಲಾಗಿದೆ ಎಂದ ಕೇಂದ್ರ ಸಚಿವರು…..

ಧಾರವಾಡ

ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ ಧಾರವಾಡ ದ ಅಳ್ನಾವರ ದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಎಲ್ಲ ಸಂದರ್ಭದಲ್ಲಿ ವಿರೋಧ ಮಾಡುತ್ತೆ ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವ ಕಾಂಪಿ ಟೇಶನ್ ಗೆ ಬಿದ್ದಿದ್ದಾರೆ.

ಹತ್ತಾರು ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಎಂದು ಹೇಳುತ್ತಾರೆ.ನಾಚಿಕೆ ಮಾನ ಮರ್ಯಾದೆ ಬುದ್ಧಿ ಇದೆಯಾ ಎಂದು ಪ್ರಶ್ನೆ ಮಾಡಲು ಬಯಸುತ್ತೇನೆ ಎಂದರು.ಕಾಂಗ್ರೆಸ್ ಪಕ್ಷದ ಕಾಲದಲ್ಲಿ ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಮೂಲಕ ಆಫೀಸ್ ನಿಂದ ಕರೆ ಮಾಡಿ ಸಾಲವನ್ನು ಕೊಡಿಸುತ್ತಿದ್ದರು. ಮತ್ತೆ ಯಾವಾಗಲೂ ವಾಪಸ್ ಪಡೆಯುತ್ತಿದ್ದರು ಇಲ್ಲ.

ರಿ ಸ್ಟ್ರಕ್ಚರಿಂಗ್ ಮಾಡುತ್ತಿದ್ದರು.ಮೋದಿ ಅವರು ಬಂದ ನಂತರ ಸಾಲವನ್ನು ವಾಪಸ್ ತುಂಬಲು ಹೇಳಿದರು.ಈಗ ಬೇರೆ ಬೇರೆ ಕಡೆ ಓಡಿ ಹೋಗಿ ದ್ದಾರೆ.ಓಡಿ ಹೋದ ಉದ್ಯಮಿಗಳ ಓಡಿ ಹೋದ ವಂಚಕರ ಆಸ್ತಿಯನ್ನು ವಶಪಡಿಸಿಕೊಳ್ಳುವ ಹೊಸ ಕಾನೂನನ್ನು ತರಲಾಗಿದೆ ಎಂದರು.

ರಾಜ್ಯದ ಹಾಗೂ ದೇಶ ಜನರಿಗೆ ಸ್ಪಷ್ಟವಾಗಿ ಹೇಳುತ್ತೇವೆ ಯಾವ ಉದ್ಯಮಿಗಳ ಸಾಲ ಮನ್ನಾವನ್ನು ಮಾಡಿಲ್ಲ.ರಾಜ್ಯ ಸರ್ಕಾರ ಭ್ರಷ್ಟಾಚಾರ ಮಾಡುವವರಿಗೆ ಸಾಥ್ ಕೊಟ್ಟಿದೆ. ಸಾಲ ವಸೂಲಿ ಮಾಡದೇ ಲಕ್ಷಾಂತರ ಕೋಟಿ ಸಾಲ ಮಾಡಿದವರು ದೇಶ ಬಿಟ್ಟು ಹೋಗಿದ್ದಾರೆ ಎಂದರು.

ಅವರ ಬೆಂಬಲಕ್ಕೆ ಕಾಂಗ್ರೆಸ್ ನಿಂತಿದೆ.ಸಾಲ ಪಡೆದವರಿಂದ 1 ರೂಪಾಯಿ ಸಾಲ ವಸೂಲಿ ಮಾಡಿಲ್ಲಾ.ಹಾಗೇನಾದ್ರೂ ಸಿಎಂ ಸಿದ್ದರಾಮ ಯ್ಯಾ ಹಾಗೂ ಡಿಸಿಎಂ ಶಿವಕುಮಾರ ಸಾಲ ಮಾಡಿದವರಿಂದ ಮರು‌ ವಸೂಲಾತಿ ಮಾಡಿದ್ದರೆ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

ನೈಸ್ ರಸ್ತೆ ಬಗ್ಗೆ ಎಚ್‌ಡಿಕೆ ದಾಖಲೆ ಬಿಡುಗಡೆ ಹೇಳಿಕೆ ವಿಚಾರ ಅವರು ದಾಖಲೆಗಳನ್ನು ಕೊಡಲಿ ಅದರ ಬಗ್ಗೆ ಸೂಕ್ತವಾದ ಪರಿಶೀಲನೆ ಮಾಡುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು

ಧಾರವಾಡ-ಬೆಳಗಾವಿ ರೈಲು ಮಾರ್ಗ ವಿಳಂಬ ವಿಚಾರ.ಭೂಸ್ವಾಧೀನ ಪ್ರಕ್ರಿಯೆ ಆಗಬೇಕು ಅರ್ಧ ಕ್ಕಿಂತ ಹೆಚ್ಚು ಭೂಮಿ ಕೊಡಬೇಕು ಆಗ ಕಾಮ ಗಾರಿ ಆರಂಭಿಸಬಹುದು.ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿ ಕೊಡಬೇಕು ಆದರೆ ರಸ್ತೆ ಮಾಡುವುದಕ್ಕೇ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ

ಗ್ಯಾರಂಟಿ ಕೊಡುವುದೇ ಸಾಕಾಗಿದೆ ಎಂದು ಸಚಿವರುಗಳು ಹೇಳುತ್ತಿದ್ದಾರೆ ರಸ್ತೆ, ಮೂಲಭೂತ ಸೌಲಭ್ಯಕ್ಕೆ ಇವರೇನು ಹಣ ಕೊಡುವ ಖಚಿತತೆ ಇಲ್ಲ

ಸುದ್ದಿ ಸಂತೆ ನ್ಯೂಸ್ ಅಳ್ನಾವರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.