ಹುಬ್ಬಳ್ಳಿ –
ಉತ್ತರ ಕರ್ನಾಟಕದ ಧಾರವಾಡದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜ ನೋತ್ಸವ ಕಾರ್ಯಕ್ರಮವು ಜನವರಿ 12ರಂದು 16ರವರೆಗೆ ಹುಬ್ಬಳ್ಳಿ ಧಾರವಾಡ ದಲ್ಲಿ ನಡೆಯ ಲಿದೆ.ಐದು ದಿನಗಳ ಅದ್ದೂರಿಯಾದ ಈ ಒಂದು ಬೃಹತ್ ಕಾರ್ಯಕ್ರಮ ಸಿದ್ದತೆ ವ್ಯವಸ್ಥೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಅಧಿಕಾರಿಗಳೊಂದಿಗೆ ಸಭೆ ಮಾಡಿದರು
ಐದು ದಿನಗಳ ಕಾಲ ಈ ಒಂದು ಕಾರ್ಯಕ್ರಮ ನಡೆಯಲಿದ್ದು ಈ ಅಭೂತಪೂರ್ವ ಕಾರ್ಯಕ್ರ ಮದ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ನೆರವೇರಿಸಲಿದ್ದಾರೆ.
ಉದ್ಘಾಟನಾ ಸಮಾರಂಭವು ಹುಬ್ಬಳ್ಳಿಯ ರೈಲ್ವೇ ಮೈದಾನದಲ್ಲಿ ಜರುಗಲಿದ್ದು ನಂತರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯ ಲಿದ್ದು ವಿವಿಧ ರಾಜ್ಯಗಳಿಂದ ಕಲಾವಿದರು, ಪ್ರೇಕ್ಷಕರು ಆಗಮಿಸುವ ಹಿನ್ನೆಲೆಯಲ್ಲಿ ಸಂಪೂರ್ಣ ವ್ಯವಸ್ಥೆಯ ಕುರಿತು ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ವಿಸ್ತೃತವಾಗಿ ಚರ್ಚಿಸಿದರು.
17ಕ್ಕೂ ಹೆಚ್ಚು ಸಮಿತಿಯನ್ನು ರಚಿಸಿ ವ್ಯವಸ್ಥಿತ ವಾಗಿ ನಿರ್ವಹಿಸಲು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವಕ,ಯುವತಿಯರಿಗೆ ಆನ್ ಲೈನ ಮೂಲಕ ನೋಂದಣಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..