ದೀಪಾವಳಿಯ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಪಕ್ಷದ ಶಾಸಕ ಆನಂದ ಮಾಮನಿ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿ ಭಾರತ ಕ್ರಿಕೇಟ್ ತಂಡಕ್ಕೆ ಶುಭ ಹಾರೈಸಿದ ಕೇಂದ್ರ ಸಚಿವರು

Suddi Sante Desk
ದೀಪಾವಳಿಯ ನಂತರ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಪಕ್ಷದ ಶಾಸಕ ಆನಂದ ಮಾಮನಿ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿ ಭಾರತ ಕ್ರಿಕೇಟ್ ತಂಡಕ್ಕೆ ಶುಭ ಹಾರೈಸಿದ ಕೇಂದ್ರ ಸಚಿವರು

ಹುಬ್ಬಳ್ಳಿ

 

ಶಾಸಕ ಆನಂದ್ ಮಾಮನಿ ನಿಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತಾಪ ಸೂಚಿಸಿ ದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಶಾಸಕ ಆನಂದ್ ಮಾಮನಿ ವಯಕ್ತಿಕವಾಗಿ ನನಗೆ ಬಹಳ ಆತ್ಮೀಯರಾಗಿದ್ರು ಮೂರು ಬಾರಿ ಶಾಸಕರಾಗಿದ್ದ ಮಾಮನಿ ಜನಾನುರಾಗಿ ಆಗಿದ್ರು ಆನಂದ್ ಮಾಮನಿಯನ್ನು ನಾನು‌ ಹದಿನೈದು ದಿನಗಳ ಹಿಂದೆ ಭೇಟಿ ಮಾಡಿದ್ದೆ ಮಾಮನಿ ಈ ಹೋರಾಟದಲ್ಲಿ ಗೆದ್ದು ಬರೋ ಭರವಸೆ ವ್ಯಕ್ತಪಡಿ ಸಿದ್ರು ಅವರಲ್ಲಿ ಬಹಳ ಧೃಡವಾದ ನಂಬಿಕೆ ಇತ್ತು ನಾನು ವೈದ್ಯರಿಗೆ ಮಾತಾಡಿದ್ದೆ ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆನಂದ್ ಮಾಮನಿ ಮೃತ ಪಟ್ಟಿದ್ದಾರೆ.ದೀಪಾವಳಿ ಹಬ್ಬದ ಸಂತೋಷ ಸಮಯದಲ್ಲಿ ಅವರು ನಿಧನವಾಗಿದ್ದು ಬಹಳ ದುಃಖವಾಗಿದೆ ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ಕೊಡಲಿ ಕುಟುಂಬಕ್ಕೆ ದುಖಃ ಬರಿಸೋ ಶಕ್ತಿ ಕೊಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು

ಇನ್ನೂ ರಾಹುಲ್ ಗಾಂಧಿಯವರಿಗೆ ಯಾರೋ ಬರೆದು ಕೊಡ್ತಾರೆ ಅವರು ಓದುತ್ತಾರೆ ರಾಹುಲ್ ಗಾಂಧಿಯವರನ್ನು ಬಹಳ ಗಂಭೀರವಾಗಿ ತಗೋ ತಿರಿ ಅದೇ ನಿಮ್ಮ ಸಮಸ್ಯೆ ಎಂದು ಜೋಶಿ ವ್ಯಂಗ್ಯ ವಾಡುತ್ತಾ ರಾಹುಲ್ ಗಾಂಧಿಗೆ ಬರೆದು ಕೊಟ್ಟಿದ್ದು ಬಿಟ್ಟು ಪ್ರತ್ಯೇಕ ಪ್ರಶ್ನೆ ಮಾಡಿದ್ರೆ ಅವರಿಗೆ ಉತ್ತರ ಕೊಡೋಕೆ ಬರಲ್ಲ ಬಾಯಿಪಾಠ ಮಾಡಿಸಿದ್ದು ಬಿಟ್ಟು ಬೇರೆ ಕೇಳಿ ಅವರಿಗೆ ಉತ್ತರ ಕೊಡೋಕೆ ಬರಲ್ಲ ಅವರ ಬಗ್ಗೆ ಏನ್ ರಿಯಾಕ್ಷನ್‌ ಮಾಡೋದು ಭಾರತ್ ಜೊಡೋ ಕಾಂಗ್ರೆಸ್ ತೊಡೋ ಯಾತ್ರೆ ಆಗ್ತಿದೆ ಹಲವರು ಕಾಂಗ್ರೆಸ್ ಚೋಡೋ ಮಾಡ್ತಿದ್ದಾರೆ ಅವರು ಜೊಡೋ ಮಾಡಬೇಕಿರೋದು. ಕಾಶ್ಮೀರವನ್ನು ಪಾಕಿಸ್ತಾ ನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ನೀವು ಭಾರತ ಜೋಡೋ ಮಾಡಿ ಚೀನಾಗೆ ಭೂಮಿ ಕೊಟ್ಟಿದ್ದರೆ ಜೊಡೋ ಮಾಡಿ ನೀವು ತೋಡೋ ಮಾಡಿದವರ ಪಾರ್ಟಿ ಯವರು ಮೊದಲು ತೋಡೋ ಮಾಡಿದರ ಜೋಡೋ ಮಾಡಿ ಭಾರತ ಮೋದಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಜೊಡೋ ಆಗಿದೆ ನೀವು ಏನ್ ಪಾಪ ಮಾಡಿದ್ರಿ

ನಿಮ್ಮ ಪಾಪದ ಪಿಂಡಗಳನ್ನು ಪರಿಮಾರ್ಜನೆಗೆ ಜೊಡೋ ಮಾಡಿ ನಿಮಗೆ ಪಶ್ಚಾತಾಪ ಆಗಿ ಜೋಡೋ ಮಾಡಿ‌ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.ಇನ್ನೂ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಹಿನ್ನಲೆ ಭಾರತ ಗೆಲ್ಲುತ್ತೆ ಎನ್ನುತ್ತಾ ಇಂಡಿಯಾ ಗೆಲ್ಲಬೇಕು ಗೆಲ್ಲುತ್ತೆ ಅದರ ಬಗ್ಗೆ ಅನುಮಾನ ಬೇಡ ಎಂದರು.

ಇನ್ನೂ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತಂತೆ ಮಾತನಾಡಿದ ಅವರು ದೀಪಾವಳಿ ನಂತ್ರ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ದೀಪಾ ವಳಿ ನಂತ್ರ ದೆಹಲಿಗೆ ಬರ್ತೀನಿ ಎಂದಿದ್ದಾರೆ ಈ ಬಗ್ಗೆ ಚರ್ಚೆ ಮಾಡು ತ್ತೇವೆ ದೀಪಾವಳಿ‌ ನಂತ್ರ ಸಚಿವ ಸಂಪುಟ ವಿಸ್ತರಣೆ

 

 

ಮಹಾದಾಯಿ ಕಾಮಾಗಾರಿ ಕಾರ್ಯಾಗಾರ ವಿಚಾರ ಅವರೇನಾದ್ರೂ ಕಾರ್ಯಗಾರ ಮಾಡಕೋಲಿ ಎಂದು ಜೋಶಿ ಗರಂ ಆದರು ಇನ್ನೂ ಜನರಿಗೆ ನೀರು ಬೇಕೋ ಅಥವಾ ಸ್ವರೂಪ ಹೇಗೆ ಇರತ್ತೆ ಅದು ಬೇಕೋ ಎನ್ನುತ್ತಾ ಗೋವಿಂದ ಕಾರಜೋಳ ಮುತುವರ್ಜಿಯಿಂದ ಒಳ್ಳೆಯ ಕೆಲಸ ಆಗ್ತಿದೆ ಟೆಕ್ನಾಲಜಿ ಉಪಯೋಗಿಸಿ ಒಳ್ಳೆ ಕೆಲಸ ಮಾಡ್ತಿದಾರೆ ಟೆಕ್ನಾಲಜಿ ಉಪಯೋಗಿಸಿ ಅರಣ್ಯ ಉಳಸಬೇಕಿದೆ ಒಂದು ವರ್ಷದೊಳಗೆ ನೀರು ಬರತ್ತೆ,ಇದು ರೈತರಿಗೆ ಅರ್ಥ ಆಗಬೇಕು ಕೆಲವರು ನಿರುದ್ಯೋಗಿಗಳು ಮೊಸರಲ್ಲಿ ಕಲ್ಲು‌ ಹುಡಕೋ‌ ಕೆಲಸ ಮಾಡ್ತಿದಾರೆ ಎನ್ನುತ್ತಾ ಮಾಜಿ ಶಾಸಕ ಎನ್ ಹೆಚ್ ಕೊನರಡ್ಡಿ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.