ಕಲಘಟಗಿ –
ಧಾರವಾಡ ಜಿಲ್ಲೆಯ ಕಲಘಟಗಿ ಯಲ್ಲಿ ನಡೆಯು ತ್ತಿರುವ ಐತಿಹಾಸಿಕ ಗ್ರಾಮದೇವತೆಗಳ ಜಾತ್ರೆ ಹಿನ್ನಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಗ್ರಾಮದೇವತೆಗಳ ದೇವಸ್ಥಾನಕ್ಕೆ ತೆರಳಿದ ಸಚಿವರು ದೇವತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ದರ್ಶನವನ್ನು ಮಾಡಿಕೊಂಡರು.
ಧಾರವಾಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಲಘಟಗಿಯಲ್ಲಿ ಎರಡು ಗ್ರಾಮ ದೇವತೆಗಳ ಐತಿಹಾಸಿಕ ಜಾತ್ರೆ ನಡೆಯುತ್ತಿದೆ. ಗ್ರಾಮದೇವತೆ ಗಳಾ ದ್ಯಾಮವ್ವ ದೇವಿ ಮತ್ತು ದುರ್ಗಮ್ಮ ದೇವಿಯ ದೇವಸ್ಥಾನದಲ್ಲಿ ಪ್ರತಿ ವರ್ಷ ಒಂಬತ್ತು ದಿನಗಳ ಕಾಲ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆಯನ್ನು ಕೇಂದ್ರ ಸಚಿವರು ಸಲ್ಲಿಸಿದರು
ಇದೇ ವೇಳೆ ಕ್ಷೇತ್ರದ ರಾಜ್ಯದ ಜನತೆಯ ಒಳಿ ತಿಗಾಗಿ ಪ್ರಾರ್ಥಿಸಿದರು.ಪ್ರತಿ ವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಗ್ರಾಮ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಹೀಗಾಗಿ ಈ ಒಂದು ಜಾತ್ರೆಯ ಹಿನ್ನಲೆಯಲ್ಲಿ ಕೇಂದ್ರ ಸಚಿವರು ಗ್ರಾಮ ದೇವತೆಗಳ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಕೇಂದ್ರ ಸಚಿವರೊಂದಿಗೆ ಈ ಒಂದು ಸಂದರ್ಭ ದಲ್ಲಿ ಶಾಸಕರಾದ ಸಿ.ಎಂ.ನಿಂಬಣ್ಣವರ, ಧಾರವಾಡ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ್ ಕುಂದಗೋಳಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..