ಹುಬ್ಬಳ್ಳಿ –
ಹುಬ್ಬಳ್ಳಿಯಿಂದ ಪಂಢರಪುರ ವಿಠಲನ ದರ್ಶನಕ್ಕೆ ನೇರ ರೈಲು ಸಂಪರ್ಕವನ್ನು ಆರಂಭ ಮಾಡಲಾ ಗಿದೆ ಹೌದು ಜನತೆಯ ಅನುಕೂಲಕ್ಕಾಗಿ ಧ್ವನಿ ಎತ್ತಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನವಿಗೆ ರೇಲ್ವೆ ಸಚಿವರು ಸ್ಪಂದಿಸಿ ಹೊಸದಾದ ರೇಲ್ವೆ ಯನ್ನು ಆರಂಭ ಮಾಡಿದ್ದಾರೆ.
ಮೈಸೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಸೋಲಾಪುರಕ್ಕೆ ಸಂಚರಿಸುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಪಂಢರಪುರಕ್ಕೆ ಸಂಪರ್ಕಿಸಲು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಈ ಹಿಂದೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಪ್ರಸ್ತಾವನೆ ಸಲ್ಲಿಸಿ ದ್ದರು ಇದೀಗ ಅನುಮೋದನೆ ದೊರೆತಿದೆ.
ಮೈಸೂರಿನಿಂದ ಹೊರಡುವ ಗಾಡಿ ಸಂಖ್ಯೆ 16535/36 ಹುಬ್ಬಳ್ಳಿ ಗದಗ ಬಾಗಲಕೋಟೆ ಮೂಲಕ ಸೋಲಾಪುರಕ್ಕೆ ಸಂಪರ್ಕಿಸುವ ರೈಲು ಇನ್ನು ಮುಂದೆ ನೇರವಾಗಿ ಪಂಢರಪುರಕ್ಕೆ ಸಂಪರ್ಕ ಕಲ್ಪಿಸಿ ವಿಠಲನ ದರ್ಶನಕ್ಕೆ ತೆರಳುವ ಭಕ್ತರಿಗೆ ಸುಲಭ ಪ್ರಯಾಣ ವ್ಯವಸ್ಥೆ ಮಾಡಿಕೊ ಡಲಿದೆ.
ಪ್ರಸ್ತಾವನೆ ಸ್ಪಂದಿಸಿ ವಿಠಲನ ಭಕ್ತರ ಬೇಡಿಕೆಗೆ ಅನುಗುಣವಾಗಿ ರೈಲು ಸೇವೆ ಒಗದಿಸಿಕೊಟ್ಟ ಪ್ರಧಾನಮಂತ್ರಿ Narendra Modi ಹಾಗೂ ಕೇಂದ್ರ ರೈಲ್ವೆ ಸಚಿವರಾದ Ashwini Vaishnaw ಅವರಿಗೆ ಧನ್ಯವಾದಗಳನ್ನು ಪ್ರಹ್ಲಾದ್ ಜೋಶಿ ಯವರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..