ಹುಬ್ಬಳ್ಳಿ –
ದಿವಂಗತ ಹನಮಂತಪ್ಪ ಗೋಕಾಕ ಮನೆಗೆ ಭೇಟೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಡುವಿ ಲ್ಲದ ಚುನಾವಣೆಯ ಕಾರ್ಯಕ್ರಮಗಳ ನಡುವೆ ಯೂ ಕೂಡಾ ನಿಧನರಾದ ಪಕ್ಷದ ಮುಖಂಡನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಾಯಕ…..ಅಣ್ಣಪ್ಪ ಗೋಕಾಕ,ಅನುಪ ಬೀಜವಾಡ ಸೇರಿದಂತೆ ಹಲವರು ಉಪಸ್ಥಿತಿ ಹೌದು
ಅನಾರೋಗ್ಯದಿಂದ ಮೃತಪಟ್ಟ ಬಿಜೆಪಿ ಪಕ್ಷದ ಮುಖಂಡ ಹನಮಂತಪ್ಪ ಗೋಕಾಕ ಅವರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು.ಹೌದು ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿರುವ ಹನಮಂತಪ್ಪ ಗೋಕಾಕ ಅವರ ನಿವಾಸಕ್ಕೆ ಪ್ರಹ್ಲಾದ್ ಜೋಶಿಯವರು ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರೊಂದಿಗೆ ತೆರಳಿ ಭೇಟಿ ಮಾಡಿದರು.
ಒಂದು ಕಡೆಗೆ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಅಬ್ಬರದ ಪ್ರಚಾರ ಓಡಾಟದ ನಡುವೆಯೂ ಕೂಡಾ ಮೃತ ಪಟ್ಟ ಪಕ್ಷದ ಮುಖಂಡ ಹನಮಂತಪ್ಪ ಅವರ ನಿವಾಸಕ್ಕೆ ಪ್ರಹ್ಲಾದ್ ಜೋಶಿಯವರು ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕಳೆದ ವಾರವಷ್ಟೇ ಅನಾರೋಗ್ಯದ ಹಿನ್ನಲೆಯಲ್ಲಿ ಹನಮಂತಪ್ಪ ಗೋಕಾಕ ಅವರು ನಿಧನರಾಗಿ ದ್ದರು ಹೀಗಾಗಿ ಪ್ರಹ್ಲಾದ್ ಜೋಶಿಯವರು ಪಕ್ಷದ ಮುಖಂಡರು ಕಾರ್ಯಕರ್ತರು ಆಪ್ತರೊಂದಿಗೆ ತೆರಳಿ ಪಕ್ಷದ ಮುಖಂಡ ನ ಕುಟುಂಬದವರಿಗೆ ಜೋಶಿಯವರು ಸಾಂತ್ವನ ಹೇಳಿದರು.ಪ್ರಹ್ಲಾದ್ ಜೋಶಿಯವರೊಂದಿಗೆ ಪಕ್ಷದ ಯುವ ಮುಖಂಡ ರಾದ ಅಣ್ಣಪ್ಪ ಗೋಕಾಕ,ಅನುಪ ಬೀಜವಾಡ,
ಪ್ರಭು ನವಲಗುಂದಮಠ,ಚಂದ್ರಶೇಖರ ಗೋಕಾಕ ಈಶ್ವರಗೌಡ ಪಾಟೀಲ,ಚನ್ನು ಹೊಸಮನಿ,ಮಾರುತಿ ಚಾಕಲಬ್ಬಿ,ಶಿವಾನಂಬ ಅಂಬಿಗೇರ,ಪ್ರವೀಣ ಕುಬಸದ,ಸಹದೇವ ಚಾಕಲಬ್ಬಿ,ವೆಂಕಟೇಶ ಕಾಟವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……