ಧಾರವಾಡ –
ಹುಬ್ಬಳ್ಳಿಯಿಂದ ದಿಲ್ಲಿ ಸಂಸತ್ ಭವನವರೆಗೆ ರುಚಿಯೊಂದಿಗೆ ಫೇಮಸ್ ಆಗಿರುವ ಮಿಶ್ರಾ ಪೇಢಾ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ – ಲೈವ್ ಪೇಢಾ ಮಾಡೋದನ್ನು ವೀಕ್ಷಣೆ ಮಾಡಿ ರುಚಿ ಸವಿದ ಪ್ರಹ್ಲಾದ್ ಜೋಶಿ ಸಾಥ್ ನೀಡಿ ಶಾಸಕ ಎಮ್ ಆರ್ ಪಾಟೀಲ್.. ಧಾರವಾಡ ಪೇಢಾ ಎಲ್ಲಾ ಕಡೆ ಇನ್ನೂ ಪಸರಿಸಲಿ ಎಂದು ಶುಭಹಾರೈಸಿದ ನಾಯಕರು
ಸದಾ ಒಂದಿಲ್ಲೊಂದು ಸರಳತೆಯ ಮೂಲಕ ಗುರುತಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿಶೇಷವಾಗಿ ಕಾಣಿಸಿಕೊಳ್ಳು ತ್ತಾರೆ ಹೌದು ಇದಕ್ಕೆ ಮತ್ತೊಂದು ತಾಜಾ ಉದಾ ಹರಣೆ ರುಚಿಯೊಂದಿಗೆ ಫೇಮಸ್ ಆಗಿರುವ ಸಂಜಯ ಮಿಶ್ರಾ ಮಾಲೀಕತ್ವದ ಮಿಶ್ರಾ ಪೇಢಾ ಘಟಕಕ್ಕೆ ಭೇಟಿ ನೀಡಿದ್ದು.
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಧಾರವಾಡ ಹೊರವಲಯದಲ್ಲಿ ದೊಡ್ಡ ಪ್ರಮಾಣ ದಲ್ಲಿ ಆರಂಭಗೊಂಡಿರುವ ಮಿಶ್ರಾ ಪೇಢಾ ಘಟಕಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಹುಬ್ಬಳ್ಳಿಯಿಂದ ದಿಲ್ಲಿಯ ಸಂಸತ್ ಭವನತನಕ ಎಲ್ಲಾರಿಗೂ ರುಚಿ ತೋರಿಸಿ ಧಾರವಾಡ ಪೇಢಾ ಅಂತ ದೇಶದಾಗೆಲ್ಲಾ ಫೇಮಸ್ ಆಗಿರೋ ನಮ್ಮ ಮಿಶ್ರಾ ಪೇಢಾದ ಘಟಕಕ್ಕೆ ಭೇಟಿ ಕೊಟ್ಟ ಸಚಿವರು ಘಟಕದಲ್ಲಿ ಸಾರ್ವಜನಿಕರ ಎದುರಿಗೆ ಲೈವ್ ಆಗಿ ತಯಾರು ಮಾಡುತ್ತಿರುವ ಪೇಢಾ ಮಾಡೋದನ್ನ ನೋಡಿದರು
ಅಲ್ಲದೇ ಸವಿರುಚಿಯನ್ನು ಸವಿದರು. ಪೇಢಾ ಜೊತೆ ಮತ್ತೆ ಬ್ಯಾರೆ ಬ್ಯಾರೆ ಸ್ವೀಟ್ಸ್ ಮಾಡ್ತಿರೋ ಮಿಶ್ರಾ ಪೇಢಾದವರ ವಹಿವಾಟ ಇನ್ನೂ ಜಾಸ್ತಿ ಆಗಲಿ ನಮ್ಮ ’ಧಾರವಾಡ ಪೇಢಾ’ ಸಿಹಿ ಎಲ್ಲಾ ಕಡೆ ಪಸರಿಸಲಿ ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಭವನ್ನು ಹಾರೈಸಿದರು.
ಈ ಒಂದು ಸಂದರ್ಭದಲ್ಲಿ ಕುಂದಗೋಳ ಶಾಸಕ ಎಮ್ ಆರ್ ಪಾಟೀಲ್,ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಉಪಸ್ಥಿತರಿದ್ದರು.ಇದೇ ವೇಳೆ ಸಂಜಯ ಮಿಶ್ರಾ ಅವರ ಟೀಮ್ ನ ಕಾರ್ಯವನ್ನು ಶ್ಲಾಘಿಸಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..