ಬೆಂಗಳೂರು –
ವಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬೀದಿ ಕಾಳಗ ಮಾಡುತ್ತಿರುವ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ವಾರ್ನಿಂಗ್ ನೀಡಿದ್ದಾರೆ. ಧಾರವಾಡ ದಲ್ಲಿ ಮಾತನಾಡಿದ ಅವರು ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟವನ್ನು ಈ ಕೂಡಲೇ ನಿಲ್ಲಿಸ ಬೇಕು ಮುಖ್ಯಮಂತ್ರಿ ಈ ಕುರಿತಂತೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಸಚಿವರು ಹೇಳಿದರು.
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯವರು ಮಾತನಾಡಿ ಮಹಿಳಾ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು. ಐಎಎಸ್ ರೋಹಿಣಿ ಹಾಗೂ ಐಪಿಎಸ್ ರೂಪಾ ನಡುವಿನ ವಾರ್ ವಿಚಾರ ಇದು ಬಹಳ ಅನಾರೋಗ್ಯಕರ ಬೆಳವ ಣಿಗೆ ನಾನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಹೇಳ್ತೆನೆ ಮುಖ್ಯಮಂತ್ರಿಗಳಿಗೆ ಕೂಡಾ ನನ್ನ ಆಗ್ರಹ ಇದೆ ಇವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಬೇಕು
ಇದು ಸರಿಯಲ್ಲ ಅವರಿಗೆ ಏನಾದ್ರು ಪರಸ್ಪರ ದೂರುಗಳಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ಕಳಿಸಬೇ ಕೆಂದು ಸೂಚನೆ ನೀಡಿದರು.ಇನ್ನೂ ಈ ರೀತಿ ರಸ್ತೆ ಯಲ್ಲಿ ನಿಂತು ಸ್ಟೆಟಮೆಂಟ್ ಕೊಡೊದು ಸರಿ ಯಲ್ಲ ಈಗಾ ನಮ್ಮ ವಿರುದ್ಧ ಕಾಂಗ್ರೆಸ್ ನವರು ಆರೋಪ ಮಾಡ್ತಾರೆ ನಾವು ಅವರ ವಿರುದ್ಧ ಆರೋಪ ಮಾಡ್ತೆವೆ ಇದು ಪೊಲಿಟಿಕಲ್ ಸಿಸ್ಟಮ್ ಆದರೆ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರು ಎರೆಚಾಟ,ಪತ್ರಿಕಾ ಹೇಳಿಕೆ ಕೊಡುವದು ಟ್ವಿಟ್ ಮಾಡುವದು ಸರಿಯಲ್ಲ ಯಾವುದೇ ಖಾಸಗಿ ಫೋಟೊ ಇರಲಿ ಆಫೀಸಿಯಲ್ ಪೋಟೊ ಬಿಡುಗಡೆ ಇರಲಿ ಯಾರೇ ಒಬ್ಬ ಅಧಿಕಾರಿ ಪರ ವಿರುದ್ಧ ಮಾತನಾಡುತ್ತಿಲ್ಲ ಇದನ್ನ ನೀವು ಸ್ಪಷ್ಟವಾಗಿ ತೊರಿಸಿ ಆದರೆ ಮಿಡಿಯಾ ಅಥವಾ ಸೋಷಿಯಲ್ ಮಿಡಿಯಾ ವಾರ್ ಇದು ಅತ್ಯಂತ ದುರ್ದೈವ ಇದು ಆಗಾಗ ಕರ್ನಾಟಕದಲ್ಲಿ ಆಗುತ್ತಿದೆ ನಾನು ಸಿಎಂಗೆ ಆಗ್ರಹಿಸುತ್ತೆನೆ, ಅತ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು
ಮುಖ್ಯಮಂತ್ರಿ ಗಳು ದಕ್ಷತೆಯಿಂದ ಸರ್ಕಾರ ನಡೆಸುತಿದ್ದಾರೆ ಈ ರೀತಿ ಕೆಲವರು ಮಾಡುತ್ತಿರು ವದು ಸರಿಯಲ್ಲ ಸಿಎಂ ಅವರಿಗೆ ನಾನು ರಾತ್ರಿ ಭೇಟಿ ಮಾಡ್ತೆನೆ ತಕ್ಷಣ ಇದನ್ನ ಸಿಎಂ ಮುಗಿಸಬೇ ಕೆಂದು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..