ಕಲಘಟಗಿಯ ಗಂಜಿ ಗಟ್ಟಿಯಲ್ಲಿ ಯಶಶ್ವಿಯಾಗಿ ನಡೆಯಿತು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾಥ್ ನೀಡಿದರು ಹಲವು ಗಣ್ಯರು…..

Suddi Sante Desk
ಕಲಘಟಗಿಯ ಗಂಜಿ ಗಟ್ಟಿಯಲ್ಲಿ ಯಶಶ್ವಿಯಾಗಿ ನಡೆಯಿತು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ –  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸಾಥ್ ನೀಡಿದರು ಹಲವು ಗಣ್ಯರು…..

ಹುಬ್ಬಳ್ಳಿ

ಹೌದು ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿಯ ಜಗದ್ಗುರು ಮಹಾಸ್ವಾಮಿಗಳ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆ ಎಲ್ ಇ ಆಸ್ಪತ್ರೆ, ಹುಬ್ಬಳ್ಳಿ ಅವರ ಸಹಯೋಗದಲ್ಲಿ ಸೇವಾಪಾಕ್ಷಿಕ ಅಭಿಯಾನದಡಿ ಇಂದು ಕಲಘಟಗಿಯ ಗಂಜಿ ಗಟ್ಟಿಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸಲಹೆ ಸೂಚನೆಗಳನ್ನು ಪಡೆದರು. ಶಿಬಿರಾರ್ಥಿಗಳಿಗೆ ಉಚಿತ ಔಷಧಗ ಳನ್ನು ಸಹ ವಿತರಿಸಲಾಯಿತು.ಕಣ್ಣಿನ ಚಿಕಿತ್ಸೆ ಮಾಡಿ, ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದವರಿಗೆ ಕೆ.ಎಲ್.ಇ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಪ್ರಭಾಕರ್ ಕೋರೆಯವರು ಭರವಸೆ ನೀಡಿದರು.

ನಮ್ಮ ಈ ಸೇವಾ ಕಾರ್ಯಕ್ಕೆ ಮತ್ತಷ್ಟು ಹೆಚ್ಚು ಪ್ರೋತ್ಸಾಹ ಸಿಕ್ಕಿದಂತಾಗಿದೆ.ಕಳೆದ ಹಲವು ವರ್ಷಗಳಿಂದ ಕ್ಷಮತಾ ಸಂಸ್ಥೆ ಈ ಉಚಿತ ಆರೋಗ್ಯ ಶಿಬಿರಗಳನ್ನು ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಾ ಬಂದಿದೆ.

ಕೆ.ಎಲ್. ಇ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ್ ಕೊರೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿ ಮಠ, ಮಾಜಿ ವಿಧಾನ ಪರಿಷತ್ ಸದಸ್ಯರಾದ  ನಾಗರಾಜ ಛಬ್ಬಿ, ಬಿಜೆಪಿ ಧಾರವಾಡ ಗ್ರಾಮಂತರದ ಅಧ್ಯಕ್ಷರಾದ  ಬಸವರಾಜ್ ಕುಂದಗೋಳ ಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.