ಕಲಘಟಗಿ –
ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಬಿಜೆಪಿ ಪಕ್ಷದ ಅಭ್ಯರ್ಥಿ ನಾಗರಾಜ ಛಬ್ಬಿ ಪರವಾಗಿ ಪ್ರಚಾರವನ್ನು ಮಾಡಿದರು ಹೌದು ಕುರವಿನಕೊಪ್ಪ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರಲ್ಲಿ ಅಭ್ಯರ್ಥಿ ನಾಗರಾಜ್ ಛಬ್ಬಿ ಅವರ ಪರವಾಗಿ ಮತಯಾಚನೆ ಮಾಡಿದರು
ಪಕ್ಷದ ಅಭ್ಯರ್ಥಿಯ ಮೇಲೆ ಇಲ್ಲಿನ ಗ್ರಾಮಸ್ಥರು ಇಟ್ಟಿರುವ ಪ್ರೀತಿ ವಿಶ್ವಾಸ ಹಾಗೂ ಅಭಿಮಾನ ನಮ್ಮನ್ನು ಪುಳಕಿತರನ್ನಾಗಿಸಿದೆ ಹಾಗೂ ಅವರ ಆಶೀರ್ವಾದ ನಮಗೆ ದೊರೆಯಲಿದೆ ಎಂಬ ಭರವಸೆ ಮೂಡಿಸಿದೆ.ಈ ಜನರ ಕಲ್ಯಾಣವೇ ನಮ್ಮ ಗುರಿ ಹಾಗೂ ಅಭಿವೃದ್ಧಿಗೆ ಮಾರ್ಗ ಎಂದರು.
ಪ್ರಚಾರ ಸಭೆಯಲ್ಲಿ ನಮ್ಮ ಅಭ್ಯರ್ಥಿ ನಾಗರಾಜ್ ಛಬ್ಬಿ ಈರಣ್ಣ ಜಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಕಲಘಟಗಿ…..