ಹುಬ್ಬಳ್ಳಿ –
ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಸೇವೆಯನ್ನು ಒದಗಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ -ಕೇಂದ್ರ ಸಚಿವರ ಮನವಿಗೆ ಸ್ಪಂದಿಸಿ ಹುಬ್ಬಳ್ಳಿಯಿಂದ ಮುಂಬೈ ಗೆ ವಿಮಾನ ಪ್ರಯಾ ಣದ ಸೇವೆ ಆರಂಭ ಮಾಡಿದ ಇಂಡಿಗೋ ಸಂಸ್ಥೆ
ಹುಬ್ಬಳ್ಳಿಯಿಂದ ಮುಂಬೈ ಗೆ ನೇರವಾಗಿ ಪ್ರಯಾಣ ಮಾಡಬಹುದಾದ ವಿಮಾನ ಸೇವೆ ಯನ್ನು ಆರಂಭ ಮಾಡಲಾಗಿದೆ.ಹೌದು ಹುಬ್ಬಳ್ಳಿ ಯಿಂದ ಮುಂಬೈ ಗೆ ಪ್ರಯಾಣಿಸಲು ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ತೊಂದರೆಯಾಗುತ್ತಿತ್ತು ಹೀಗಾಗಿ ಈ ಒಂದು ಸಮಸ್ಯೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಇಂಡಿಗೋ ಸಂಸ್ಥೆಯೊಂದಿಗೆ ಮಾತನಾಡಿ ಸೇವೆಯನ್ನು ಆರಂಭ ಮಾಡುವಂತೆ ಒತ್ತಾಯವನ್ನು ಮಾಡಿದ್ದರು
ಕೇಂದ್ರ ಸಚಿವರ ಮನವಿ ಒತ್ತಾಯದ ಬೆನ್ನಲ್ಲೇ ಸಧ್ಯ ಹುಬ್ಬಳ್ಳಿಯಿಂದ ಮುಂಬೈ ಗೆ ವಿಮಾನದ ನೂತನ ಸೇವೆ ಆರಂಭವಾಗಿದೆ. ಹುಬ್ಬಳ್ಳಿಯಿಂದ ಮುಂಬೈಗೆ ಏರ್‌ಬಸ್ ವಿಮಾನ ಸೇವೆಯನ್ನು ನೂತನವಾಗಿ ಆರಂಭ ಮಾಡಲಾಗಿದೆ. ಹುಬ್ಬಳ್ಳಿ ಯಿಂದ ಮುಂಬೈಗೆ ಈ ಹಿಂದೆ ATR ವಿಮಾನ ಸಂಚರಿಸುತ್ತಿದ್ದು ಪ್ರಯಾಣಿಕರ ಬೇಡಿಕೆಗೆ ಅನು ಗುಣವಾಗಿ 186 ಆಸನಗಳ ವ್ಯವಸ್ಥೆ ಇರುವ ವಿಮಾನ ಆರಂಭಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮನವಿ ಮಾಡಿದ್ದರು.
ಇವರ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಸಂಸ್ಥೆ ನೂತನ ವಿಮಾನ ಸೇವೆ ಯನ್ನು ಹುಬ್ಬಳ್ಳಿಯಿಂದ ಆರಂಭಿಸಿದೆ. ಇನ್ನೂ ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಪ್ರಯಾಣಿ ಕರಿಗೆ ಇನ್ನೂ ಪ್ರಯಾಣ ಸುಖಕರವಾಗಲಿದೆ.ಇತ್ತ ಈ ಒಂದು ಸೇವೆಯನ್ನು ಆರಂಭ ಮಾಡಿದ ಇಂಡಿಗೋ ಸಂಸ್ಥೆಗೆ ಧನ್ಯವಾದಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.
ನೂತನ ವಿಮಾನಸೇವೆಯ ಸಮಯ ಈ ಕೆಳಗಿನಂತಿದೆ.ಮುಂಬೈ – ಹುಬ್ಬಳ್ಳಿ (6E 936): ಮುಂಬೈನಿಂದ ನಿರ್ಗಮನ: 12:00 PM
ಹುಬ್ಬಳ್ಳಿಗೆ ಆಗಮನ: 1:15 PM ಹುಬ್ಬಳ್ಳಿ – ಮುಂಬೈ (6E 937): ಹುಬ್ಬಳ್ಳಿಯಿಂದ ನಿರ್ಗಮನ: 1:45 PM ಮುಂಬೈಗೆ ಆಗಮನ: 2:40 PM
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..