ಉಳವಿ –
ಸಂಪನ್ನಗೊಂಡ ಧಣಿಯ 7ನೇ ವರ್ಷದ ಉಳವಿ ಪಾದಯಾತ್ರೆ – ಕೊನೆಯ ದಿನದ ಪಾದಯಾತ್ರೆಗೆ ಸಾಕ್ಷಿಯಾದ್ರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, KMF ಅಧ್ಯಕ್ಷ ಶಂಕರ ಮುಗದ,ನೀತಿನ್ ಇಂಡಿ ಸೇರಿದಂತೆ ಅಪಾರ ಜನಸ್ತೋಮ…..
ಮಾಜಿ ಶಾಸಕ ಅಮೃತ ದೇಸಾಯಿ ಕೈಗೊಂಡಿದ್ದ ಮತ್ತೊಂದು ಉಳವಿ ಪಾದಯಾತ್ರೆಗೆ ಮುಕ್ತಾಯ ಗೊಂಡಿದೆ.ಕಳೆದ ನಾಲ್ಕು ದಿನಗಳಿಂದ ಗರಗ ಮಡಿವಾಳೇಶ್ವರ ದೇವಸ್ಥಾನದಿಂದ ಆರಂಭಗೊಂ ಡಿದ್ದ ಈ ಒಂದು ಪಾದಯಾತ್ರೆ ಉಳವಿ ಯಲ್ಲಿ ಮುಕ್ತಾಯಗೊಂಡಿತು.
ಇನ್ನೂ ಕಳೆದ 6 ವರ್ಷಗಳಿಂದ ಈ ಒಂದು ಪಾದಯಾತ್ರೆಯನ್ನು ಮಾಡಿಕೊಂಡು ಬರುತ್ತಿದ್ದು ಈ ವರ್ಷದ 7ನೇ ಪಾದಯಾತ್ರೆ ಯಶಶ್ವಿಯಾಗಿ ಮುಕ್ತಾಯಗೊಂಡಿದೆ.ಓಂ ನಮಃ ಶಿವಾಯ ಎನ್ನುತ್ತಾ ಗರಗದ ಗುರು ಮಡಿವಾಳೇಶ್ವರ ಕಲ್ಮಠದಿಂದ ಆರಂಭಗೊಂಡ ಪಾದಯಾತ್ರೆಯೂ ತೆರೆ ಕಂಡಿತು.ಉಳವಿಯ ಚನ್ನಬಸವೇಶ್ವರ ಸನ್ನಿಧಿವರೆಗೆ
ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿಗ ಳಾದ ಪ್ರಶಾಂತ ದೇವರ ನೇತೃತ್ವದಲ್ಲಿ ಈ ವರ್ಷದ ಯಾತ್ರೆ ನಡೆಯಿತು.7ನೇ ವರ್ಷದ ಉಳವಿಯ ಪಾದಯಾತ್ರೆಯ 4 ದಿನದ ನಡಿಗೆ ಮೂಲಕ ಉಳವಿ ಚೆನ್ನಬಸವೇಶ್ವರ ದೇವಸ್ತಾನ ತಲುಪಿ ದೇವರ ದರ್ಶನದೊಂದಿಗೆ ಪೂಜೆ ಸಲ್ಲಿಸಿ ಮುಕ್ತಾ ಯಗೊಳಿಲಾಯಿತು.
ಉಳವಿಯ ಚನ್ನಬಸವೇಶ್ವರ ದೇವಸ್ಥಾನಕ್ಕೆ ಪ್ರತಿ ವರ್ಷದಂತೆ ಮಾಜಿ ಶಾಸಕ ಅಮೃತ ದೇಸಾಯಿ ಯವರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅಭಿಮಾನಿಗಳು ಆಪ್ತರು ಕುಟುಂ ಬದ ಸದಸ್ಯರು ಕೂಡಾ ಆಗಮಿಸಿ ಯಾತ್ರೆಗೆ ಮೆರುಗು ನೀಡುವುದರೊಂದಿಗೆ ದೇವರ ದರ್ಶನ ಪಡೆದು ಪುನೀತರಾಗಿದ್ದು ಕಂಡು ಬರುತ್ತದೆ.
ಇನ್ನೂ ಕೊನೆಯ ದಿನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಆಗಮಿಸಿ ಅಮೃತ ದೇಸಾಯಿ ಯವರಿಗೆ ಶುಭವನ್ನು ಕೋರಿದರು. ಮಡಿವಾಳೇ ಶ್ವರ ಕಲ್ಮಠ ಟ್ರಸ್ಟ್ ಕಮಿಟಿ ಕಾರ್ಯದ್ಯಕ್ಷರಾದ ಅಶೋಕ ದೇಸಾಯಿ,ಪ್ರೀಯಾ ಅಮೃತ ದೇಸಾಯಿ,ಪಾಲಿಕೆಯ ಸದಸ್ಯರಾಗಿರುವ ನಿತೀನ್ ಇಂಡಿ,ಕೆ ಎಂ ಎಫ್ ಅಧ್ಯಕ್ಷರಾದ ಶಂಕರ್ ಮುಗದ ಮಹೇಶ್ ಯಲಿಗಾರ,ಹಾಗೂ ಪ್ರಮುಖರು ಸಾಕ್ಷಿಯಾದ್ರು.
ಸುದ್ದಿ ಸಂತೆ ನ್ಯೂಸ್ ಉಳವಿ…..