ಬೆಂಗಳೂರು –
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ಹೊಸದಾಗಿ ಕಲಿಕೆಯಲ್ಲಿ ಆರಂಭ ಮಾಡಲು ಹೊರಟಿರುವ ಹೊಸ ವ್ಯವಸ್ಥೆಗೆ ರಾಜ್ಯದ ಖಾಸಗಿ ಶಾಲೆಗಳ ಒಕ್ಕೂಟದ ವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಹೌದು ಪ್ರಸಕ್ತ ವರ್ಷದಿಂದ ಭಗವದ್ಗೀತೆ ಬೋಧನೆಗೆ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪ ಡಿಸಿದೆ.ಹೌದು ಪ್ರಸ್ತಕ ವರ್ಷದಿಂದ ರಾಜ್ಯದ ಶಾಲೆಗಳಲ್ಲಿ ಭಗವದ್ಗೀತೆ ಜೊತೆಗೆ ರಾಮಾಯಣ ಮಹಾಭಾರತ ಬೋಧ ನೆಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.ಆದರೆ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ಕಿಡಿಕಾರಿದ್ದು ಎಲ್ಲರಿಗೂ ಕಡ್ಡಾಯ ಭಗವದ್ಗೀತೆ ಕಲಿಕೆಗೆ ಒತ್ತಾಯಿಸ ಬಾರದು ಎಂದು ಹೇಳಿದೆ.ಶಾಲೆಗಳಲ್ಲಿ ಭಗವದ್ಗೀತೆಯ ಜೊತೆಗೆ ಬೈಬಲ್, ಕುರಾನ್ ಗೂ ಅವಕಾಶ ನೀಡಬೇಕು. ಕುರಾನ್, ಬೈಬಲ್ ಗೆ ಯಾಕೆ ಅವಕಾಶ ಇಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದು ಇದನ್ನು ಇಲಾಖೆ ಸರ್ಕಾರ ಯಾವ ರೀತಿ ತಗೆದುಕೊಂಡು ಮುಂದೇನು ಮಾಡುತ್ತದೆ ಎಂಬೊದನ್ನು ಕಾದು ನೋಡ ಬೇಕಿದೆ.