ಧಾರವಾಡ –
19.5 ಕೋಟಿ ರೂಪಾಯಿ ವೆಚ್ಚದಲ್ಲಿ ಧಾರವಾ ಡದ ರೈಲ್ವೆ ನಿಲ್ದಾಣವನ್ನು ಸಕಲ ಸೌಲಭ್ಯಗಳೊಂ ದಿಗೆ ನಿರ್ಮಾಣ ಮಾಡಲಾಗಿದ್ದು ಹೈಟೆಕ್ ಸೌಲಭ್ಯ ಗಳೊಂದಿಗೆ ನಿರ್ಮಾಣಗೊಂಡ ಈ ಒಂದು ರೈಲ್ವೆ ನಿಲ್ದಾಣವನ್ನು ಇಂದು ಲೋಕಾರ್ಪಣೆ ಮಾಡಲಾ ಯಿತು.ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಟವ್ ಮತ್ತು ಪ್ರಹ್ಲಾದ್ ಜೋಶಿ ಅವರು ಉದ್ಘಾಟನೆ ಮಾಡಿದರು.
ವೇದಿಕೆಯ ಸಮಾರಂಭದ ನಂತರ ಸುಂದರವಾಗಿ ಕಾಣುತ್ತಿರುವ ರೈಲ್ವೆ ನಿಲ್ದಾಣದ ಮುಂದೆ ರೈಲ್ವೆ ಸಚಿವರು ತಮ್ಮ ಗುರುಗಳಾದ ಪ್ರಹ್ಲಾದ್ ಜೋಶಿ ಅವರೊಂದಿಗೆ ಸೆಲ್ಪಿ ಪೊಟೊವನ್ನು ತಗೆಸಿಕೊಂ ಡರು. ಹೌದು ಸಂಗೀತ ಲೋಕಕ್ಕೆ ಗುರು ಶಿಷ್ಯರನ್ನು ನೀಡಿದ ಈ ಒಂದು ಜಿಲ್ಲೆಯಲ್ಲಿ ಪ್ರಹ್ಲಾದ್ ಜೋಶಿ ಅಂಥವರು ನನಗೆ ಗುರುವಾಗಿದ್ದಾರೆ ಇನ್ನೂ ಇಲ್ಲಿನ ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ನಾನು ಬಂದಿದ್ದು ತುಂಬಾ ಸಂತೋಷವಾಗಿದ್ದು ಸಾಕ್ಷಿಯಾಗಿದ್ದು ತುಂಬಾ ಸಂತಸವನ್ನುಂಟು ಮಾಡಿದೆ ಎಂದು ರೈಲ್ವೆ ಸಚಿವರು ಹುಬ್ಬಳ್ಳಿಯಲ್ಲಿ ಹೇಳಿದ್ದರು ಇದರ ನಡುವೆ ಧಾರವಾಡ ರೈಲ್ವೆ ನಿಲ್ದಾಣದ ಹೊರಗಡೆ ತಮ್ಮ ಗುರುಗಳೊಂದಿಗೆ ನೆನಪಿಗಾಗಿ ಒಂದು ಸೆಲ್ಪಿಯನ್ನು ತಗೆದುಕೊಂ ಡರು
ಒಂದು ಕಡೆ ತಾವೇ ಹೇಳಿದಂತೆ ಗುರುಗಳು ಮತ್ತೊಂದು ಕಡೆಗೆ ಇಲಾಖೆಯಿಂದ ಅಭಿವೃದ್ದಿ ಗೊಂಡ ಗುರುಗಳ ಕ್ಷೇತ್ರದಲ್ಲಿನ ವಿದ್ಯಾಕಾಶಿಯ ಚಿತ್ರಣ ಇವೆಲ್ಲದರ ನಡುವೆ ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಧಾರ ವಾಡದ ರೈಲ್ವೆ ನಿಲ್ದಾಣ ಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆ ಈಡೇರಿದ ಕ್ಷಣದ ಚಿತ್ರಣವನ್ನು ಕೇಂದ್ರ ಸಚಿವರು ತಮ್ಮ ಮೊಬೈಲ್ ನಲ್ಲಿ ಸೆಲ್ಪಿ ತಗೆದುಕೊಳ್ಳುವ ಮೂಲಕ ನೆನಪನ್ನು ಸೇವ್ ಮಾಡಿಕೊಂಡರು
ಈ ಒಂದು ಸೆಲ್ಪಿಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕೂಡಾ ಕ್ಲೀಕ್ ಆಗಿ ಸಾಕ್ಷಿಯಾದರು. ಒಟ್ಟಾರೆ ಯಾವುದೇ ವೇದಿಕೆಯ ಕಾರ್ಯಕ್ರಮ ಸಭೆ ಸಮಾರಂಭ ಮಾತುಗಳು ಇದ್ದೇ ಇರುತ್ತವೆ ಆದರೆ ಧಾರವಾಡದ ರೈಲ್ವೆ ನಿಲ್ದಾಣದಲ್ಲಿನ ಈ ಒಂದು ಕಾರ್ಯಕ್ರಮ ಅದರಲ್ಲೂ ಕೇಂದ್ರ ರೈಲ್ವೆ ಸಚಿವರ ಸೆಲ್ಪಿ ಪೊಟೊ ವಿಶೇಷವಾಗಿ ಕಂಡು ಬಂದಿತು ಅದು ಕೇಂದ್ರ ಸಚಿವ ಪ್ಲಹ್ಲಾದ್ ಜೋಶಿ ಅವರು ಸಾಧನೆಗೆ ಈ ಒಂದು ಪೊಟೊ ಸಾಕ್ಷಿ ಯಾಗಿದ್ದು ನಿಜಕ್ಕೂ ಹಿಡಿದ ಕೈಗನ್ನಡಿಯಾಗಿದೆ.