ಬೆಂಗಳೂರು –
ದಸರಾ ರಜೆ ಮುಗಿಸಿಕೊಂಡು ಇಂದಿನಿಂದ ರಾಜ್ಯಾಧ್ಯಂತ ಶಾಲೆಗಳಿಗೆ ಶಿಕ್ಷಕರು ಹಾಜರಾಗಿದ್ದಾರೆ.ಹೌದು ಒಂದು ಕಡೆಗೆ ಇಂದಿನಿಂದ ರಜೆ ಮುಗಿಸಿಕೊಂಡು ಶಿಕ್ಷಕರು ಹಾಜರಾಗಿದ್ದು ಮತ್ತೊಂದು ಕಡೆಗೆ ಕೆಲವೊಂದಿಷ್ಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದಿನಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಪ್ಪು ಪಟ್ಟಿ ಚಳುವಳಿಗೆ ಕರೆ ನೀಡಿದೆ.
ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಸೇವಾ ವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಸಹಕಾರ ಚಳುವಳಿ ನಡೆಸಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕರೆ ಕೊಟ್ಟಿದ್ದು ಈ ಒಂದು ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಕಪ್ಪು ಪಟ್ಟಿ ಚಳುವಳಿಗೆ ಅಭೂತಪೂರ್ವ ವಾದ ಬೆಂಬಲ ಕಂಡು ಬಂದಿದೆ.
ಹೌದು ಈಗಾಗಲೇ ಅಕ್ಟೋಬರ್ 4 ರಿಂದ ತರಬೇತಿ ಬಹಿಷ್ಕಾರ ಮುಂದುವರಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಇದೇ ಇಂದಿನಿಂದ 29 ರವರೆಗೆ ಕಪ್ಪ ಪಟ್ಟಿ ಧರಿಸಿ ಶೈಕ್ಷಣಿಕ ಚಟುವಟಿಕೆ ನಿರ್ವಹಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕರೆ ನೀಡಿರುವ ಈ ಒಂದು ಹೋರಾಟಕ್ಕೆ ರಾಜ್ಯದ ತುಂಬೆಲ್ಲಾ ಅಭೂತಪೂರ್ವವಾದ ಬೆಂಬಲ ಕಂಡು ಬಂದಿದ್ದು.ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಶಿಕ್ಷಕ ಬಂಧುಗಳು ಶಾಲೆಗಳಿಗೆ ಹಾಜರಾಗಿದ್ದಾರೆ.
ರಾಜ್ಯದ ಬಹುತೇಕ ಎಲ್ಲಾ ಶಾಲೆಗಳಲ್ಲೂ ಶಿಕ್ಷಕರು ಕೈಗೊಂದು ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಕರ್ತವ್ಯವನ್ನು ಮಾಡುತ್ತಿದ್ದಾರೆ. ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನ ಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇ ಖರ ನುಗ್ಗಲಿ ಸೇರಿದಂತೆ ಹಲವರು ಸ್ವತಃ ಶಾಲೆಗಳಿಗೆ ಹೋಗಿ ಪರಿಶೀಲನೆ ಮಾಡಿ ಶಿಕ್ಷಕರ ಹೋರಾಟಕ್ಕೆ ಸಾಥ್ ನೀಡಿ ವೀಕ್ಷಣೆ ಮಾಡಿದ್ದು ಕಂಡು ಬಂದಿತು.
ಇನ್ನೂ ಇವೆಲ್ಲದರ ನಡುವೆ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸ ದಿದ್ದರೆ ಅ. 30 ರಿಂದ ನ. 10 ರವರೆಗೆ ಮಧ್ಯಾಹ್ನದ ಬಿಸಿ ಯೂಟ ಮಾಹಿತಿ ಅಪ್ ಡೇಟ್ ಮಾಡದಿರಲು 11ರಿಂದ 18ರವರೆಗೆ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್‌ಎಟಿಎಸ್) ಪೋರ್ಟಲ್ ನಲ್ಲಿ ಮಾಹಿತಿ ಅಪ್‌ಡೇಟ್ ಮಾಡದಿರಲು ಸಂಘ ನಿರ್ಧರಿಸಿದೆ.
ಆ ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ಮಟ್ಟ ದಲ್ಲಿ ರ್ಯಾರಲಿ,ಧರಣಿ ಸತ್ಯಾಗ್ರಹ,ತರಗತಿ ಬಹಿಷ್ಕಾರ ಶಾಲಾ ಬಹಿಷ್ಕಾರದಂಥ ಹೋರಾಟ ನಡೆಸಲು ಸಂಘ ಮುಂದಾಗಿದೆ.ಮುಖ್ಯ ಶಿಕ್ಷಕರಿಗೆ 15,20,25 ವರ್ಷಗಳ ವೇತನ ಬಡ್ತಿ,ನೂತನ ಪಿಂಚಣಿ ಯೋಜನೆ ರದ್ದುಗೊಳಿಸು ವುದು,ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ,ದೈಹಿಕ ಶಿಕ್ಷಕರ ಸಮಸ್ಯೆಯನ್ನೂ ಬಗೆಹರಿಸಬೇಕು ಎಂದು ಸಂಘ ಬೇಡಿಕೆ ಇಟ್ಟಿದೆ.
ಇದೇ 21ರಂದು ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಮೂಲಕ ಹಾಗೂ 25ರಂದು ಜಿಲ್ಲಾಮಟ್ಟದಲ್ಲಿ ಉಪ ನಿರ್ದೇಶಕರ ಮೂಲಕ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು.ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಯ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಂಭುನಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ ತಿಳಿಸಿ ದ್ದಾರೆ.
ಇದು KSPSTA ಸಂಘದ ನಿಲವು ಆದರೆ ಇನ್ನೂ ಇತ್ತ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಇದಕ್ಕೆ ಬೆಂಬಲವನ್ನು ವ್ಯಕ್ತಪಡಿಸೊದಿಲ್ಲ ಎಂದಿದ್ದಾರೆ ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಆರಂಭದ ಕಪ್ಪು ಪಟ್ಟಿಯ ಈ ಒಂದು ಹೋರಾಟಕ್ಕೆ ಮೊದಲನೇಯ ದಿನ ರಾಜ್ಯಾಧ್ಯಂತ ಸಾಕಷ್ಟು ಪ್ರಮಾಣದಲ್ಲಿ ಬೆಂಬಲವನ್ನು ಶಿಕ್ಷಕರು ನೀಡಿದ್ದಾರೆ
ಆರಂಭದ ಈ ಒಂದು ಹೋರಾಟಕ್ಕೆ ಮೊದಲನೇಯ ದಿನ ಕಪ್ಪು ಪಟ್ಟಿಯ ಅಸಹಕಾರ ಚಳುವಳಿಗೆ ಶಿಕ್ಷಕರಿಂದ ಉತ್ತಮವಾದ ಸ್ಪಂದನೆ ಸಿಕ್ಕಿದ್ದು ಇನ್ನಾದರೂ ಸರ್ಕಾರ ಶಿಕ್ಷಣ ಸಚಿವರು ಶಿಕ್ಷಕರತ್ತ ಕಣ್ತೇರೆದು ನೋಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಇಲ್ಲವಾದರೆ ಹಂತ ಹಂತವಾಗಿ ರಾಜ್ಯದಲ್ಲಿ ಶಿಕ್ಷಕರ ಹೋರಾಟ ತೀವ್ರಗೊಳ್ಳಲಿದೆ.