ಬೆಂಗಳೂರು –
ಲಾಕ್‍ಡೌನ್ ತೆರವುಗೊಂಡು ಬಸ್ ಸಂಚಾರ ಆರಂಭವಾಗುವವರೆಗೆ ಶಿಕ್ಷಕಿಯರು ಮನೆಯಿಂ ದಲೇ ಕರ್ತವ್ಯ ನಿರ್ವಹಿಸಲು ಸೂಚಿಸಿ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಆದೇಶಿಸಿದ್ದಾರೆ.

ಮಂಗಳವಾರ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂ ದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿದಿದೆ. ಹಾಗೂ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಪ್ರಾರಂಭವಾ ಗಿಲ್ಲ. ಹೀಗಾಗಿ ಶಿಕ್ಷಕಿಯರು ಜೂ.21ರವರೆಗೆ ಮನೆ ಯಿಂದಲೇ ಕಾರ್ಯನಿರ್ವಹಿಸುವಂತೆ ಅಧಿಕಾರಿ ಗಳು ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದ್ದಾರೆ.

ಜು.1 ರಿಂದ ಶಾಲೆಗಳು ಆರಂಭವಾಗುವ ಹಿನ್ನೆಲೆ ಯಲ್ಲಿ ನಿನ್ನೆಯಷ್ಟೆ ಶಿಕ್ಷಕ ವೃಂದಕ್ಕೆ ಪರಿಷ್ಕೃತ ವೇಳಾ ಪಟ್ಟಿ ನೀಡಲಾಗಿತ್ತು.ಅದರಂತೆ ಶಿಕ್ಷಕರು ಜೂ.15 ರಿಂದಲೇ ಶಾಲೆಗಳಿಗೆ ಹಾಜರಾಗಿ ಸಕಲ ಸಿದ್ಧತೆಯಲ್ಲಿ ತೊಡಗಿಕೊಳ್ಳಲು ಆದೇಶಿಸಲಾಗಿತ್ತು.ಆದರೆ ಶಿಕ್ಷಕಿ ಯರ ಸಮಸ್ಯೆಯನ್ನು ಪರಿಗಣಿಸಿ, ಏಕೋಪಾ ಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರನ್ನು ಹೊರತುಪಡಿಸಿ ಉಳಿದಂತೆ ಸಂಚಾರಕ್ಕೆ ಅನಾನುಕೂಲವಿರುವ ಮಹಿಳಾ ಶಿಕ್ಷಕಿ ಯರು ಜೂ.21, 2021 ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಜೂ.14ರಂದು ಹೊರಡಿಸಿರುವ ಆದೇಶಕ್ಕೆ ತಿದ್ದುಪ ಡಿಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.