ಧಾರವಾಡ –
NREG ಯೋಜನೆಡಿಯಲ್ಲಿ ನಡೆದ ಪ್ಲೇವರ್ಸ್ ಕಾಮಗಾರಿ ಹಣ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ PDO ನಿನ್ನೆಯಷ್ಟೇ ಧಾರವಾಡದಲ್ಲಿ ದೇವರ ಹುಬ್ಬಳ್ಳಿಯ PDO ಮಹಮ್ಮದ್ ಯೂಸುಫ್ ಚಕೋಲಿ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದರು. NREG ಯೋಜನೆ ಯಲ್ಲಿ ಕಾಮಗಾರಿ ಮಾಡಿದ ಬಿಲ್ ಬಿಡುಗಡೆ ಮಾಡುವ ವಿಚಾರ ಕುರಿತು ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆಗಿದ್ದರು.ಇವರನ್ನು ಬಂಧಿ ಸಿದ ಎಸಿಬಿ ಅಧಿಕಾರಿಗಳು ತಮ್ಮ ಕಾರ್ಯಗ ಳನ್ನು ಮುಗಿಸಿಕೊಂಡು ಸಧ್ಯ ನ್ಯಾಯಾಧೀಶರ ಎದುರಿಗೆ ಹಾಜರು ಮಾಡಿ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೇವರಹುಬ್ಬಳ್ಳಿಯ ಆರೇರ ಎಂಬುವರ ಬಳಿ ಹಣಕ್ಕೆ ಗ್ರಾಮ ಪಂಚಾಯತಿ PDO ಮಹಮ್ಮದ್ ಯೂಸುಫ್ ಚಕೋಲಿ ಎಂಬುವರೇ ಟ್ರ್ಯಾಪ್ ಆಗಿ ಸಧ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇನ್ನೂ ಪ್ರಮುಖವಾಗಿ ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಂತೆ ಸಾರ್ವಜನಿಕರು ಕೂಡಾ ಎಸಿಬಿ ಇಲಾಖೆಗೆ ದೂರನ್ನು ನೀಡುತ್ತಿದ್ದು ಇದರ ಬೆನ್ನಲ್ಲೇ ದಾಳಿಯಾಗಿ ಅಧಿಕಾರಿಗಳು ಕೂಡಾ ಟ್ರ್ಯಾಪ್ ಅಸಗಿ ಚಿಲ್ಲರೆ ಹಣಕ್ಕೆ ಕೈ ಹಾಕಿ ಜೈಲು ಸೇರುತ್ತಿದ್ದಾರೆ.ಆದರೂ ಕೂಡಾ ನಮ್ಮ ಸರ್ಕಾರಿ ನೌಕರರು ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳು ತ್ತಿಲ್ಲ. ಬುದ್ದಿ ಕಲಿಯುತ್ತಿಲ್ಲ ಗೊತ್ತಿದ್ದರೂ ಕೂಡಾ ಮತ್ತೆ ಮತ್ತೆ ಲಂಚಕ್ಕೆ ಬೇಡಿಕೆ ಇಟ್ಟು ಟ್ರ್ಯಾಪ್ ಆಗುತ್ತಿದ್ದಾರೆ. ಇನ್ನಾದರೂ ನಮ್ಮ ಸರ್ಕಾರಿ ನೌಕರರು ಈ ಕುರಿತು ಸುಧಾರಿಸಿಕೊಂಡು ಅವಲೋಕನ ಮಾಡಿಕೊಳ್ಳೊ ದು ಅವಶ್ಯಕತೆ ಇದೆ