ಬೆಂಗಳೂರು –
ಸಧ್ಯ ಈಗಾಗಲೇ ರಾಜ್ಯದಲ್ಲಿ ಸಿಆರ್ ಪಿ ಮತ್ತು ಬಿಆರ್ ಪಿ ಹುದ್ದೆಗಳಿಗೆ ಕೌನ್ಸ್ ಲಿಂಗ್ ನ್ನು ಕರೆಯಲಾಗಿದ್ದ ಹೀಗಾಗಿ ಈ ಹಿಂದೆ ಖಾಲಿ ಹುದ್ದೆಗಳ ಕುರಿತಂತೆ ಮಾಹಿತಿ ಕಲೆಹಾಕಲಾ ಗಿದ್ದು ಸಧ್ಯ ಮತ್ತೊಂದು ಸುತ್ತು ನಡೆಯಲಿದ್ದು ಹೀಗಾಗಿ ಸಧ್ಯ ಖಾಲಿ ಇರುವ ಸಿಆರ್ ಪಿ ಮತ್ತು ಬಿಆರ್ ಪಿ ಹುದ್ದೆ ಗಳ ಕುರಿತಂತೆ ಸಂಪೂರ್ಣವಾಗಿ ಈವರೆಗೆ ಖಾಲಿ ಇರುವ ಹುದ್ದೆಗಳನ್ನು ಅಪ್ಡೇಟ್ ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯವನ್ನು ಮಾಡಿದೆ

ರಾಜ್ಯಾಧ್ಯಕ್ಷ ಶಂಭುಲಿಂಗನೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ರಾಜ್ಯದ ಸಿಆರ್ ಪಿ ಮತ್ತು ಬಿಆರ್ ಪಿ ಕೌನ್ಸ್ ಲಿಂಗ್ ನಿರೀಕ್ಷೆಯಲ್ಲಿರುವ ಧ್ವನಿ ಯಾಗಿ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಒತ್ತಾಯವನ್ನು ಮಾಡಿ ಆಗ್ರಹವನ್ನು ಮಾಡಿದ್ದಾರೆ.