ಚಳ್ಳಕೆರೆ –
ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ 300 ಕೊಠಡಿಗಳು ಶಿಥಿಲಗೊಂಡಿದ್ದು .ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿರುವ ಕಾರಣ ಮಕ್ಕಳು ಎಚ್ಚರಿಕೆ ವಹಿಸಬೇಕೆಂದು ಚಳ್ಳಕೇರಿ ಬಿಇಓ ಕೆ ಎಸ್ ಸುರೇಶ್ ಹೇಳಿದರು.ಚಳ್ಳಕೇರಿಯಲ್ಲಿ ಮಾತನಾಡಿದ ಅವರು ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಎಲ್ಲಾ ಕೊಠಡಿಗಳನ್ನು ತಪ್ಪದೇ ಪರಿಶೀಲನೆ ನಡೆಸುವ ಮೂಲಕ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಅಧಿಕಾರಿ ಗಳು ಸಲಹೆ ನೀಡಿದ್ದಾರೆ.
ಶಾಲಾ ಕೊಠಡಿಗಳ ದುರಸ್ತಿಗೆ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹೇಳಿದರು ಇನ್ನೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರತಿದಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗೆ ಭೇಟಿ ನೀಡಿ ಮಳೆಹಾನಿ ವರದಿ ಸಲ್ಲಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು. ಇವೆಲ್ಲದರ ನಡುವೆ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಯಾಗುತ್ತಿದ್ದು ಹೀಗಾಗಿ ಈ ಮಳೆ ನಿಂತ ನಂತರ ಶಾಲೆಯ ಲ್ಲಿನ ಪರಸ್ಥಿತಿಯನ್ನು ನೋಡಿಕೊಂಡು ಸುರಕ್ಷತೆಯ ಕ್ರಮ ವನ್ನು ಕೈಗೊಳ್ಳುವಂತೆ ಶಾಲಾ ಶಿಕ್ಷಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.