ಬೆಂಗಳೂರು –
ರಾಜ್ಯ ಬಜೆಟ್ ಗೆ ಇನ್ನೇನು ಎರಡೆ ದಿನಗಳು ಬಾಕಿ ಇವೆ ಹೀಗಾಗಿ ಈ ಒಂದು ಹಿನ್ನೆಲೆಯಲ್ಲಿ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ NPS ರದ್ದು ಮಾಡಿದ್ದು OPS ಜಾರಿ ಮಾಡಲಾಗಿದೆ.ಇದರ ಬೆನ್ನಲ್ಲೇ ಈಗ ದೇಶದ ಹಲವು ರಾಜ್ಯದಲ್ಲೂ ಇದನ್ನು ಜಾರಿ ಮಾಡುವಂತೆ ಒತ್ತಾಯ ಕೇಳಿ ಬಂದಿದ್ದು ರಾಜ್ಯದಲ್ಲೂ ಕೂಡಾ ಕೂಗೂ ಜೋರಾಗಿದೆ ಹೌದು ರಾಜ್ಯದ NPS ನೌಕರರ ಸಂಘಟನೆ ಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಸಭೆ ಮಾಡಿದರು

ಕರ್ನಾಟಕ ರಾಜ್ಯ NPS ನೌಕರ ಸಂಘದ ಅಧ್ಯಕ್ಷರಾದ ಶಾಂತಾರಾಮ ರವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಭೇಟಿ ಮಾಡಿ NPS ರದ್ದತಿ ಕುರಿತು ಚರ್ಚೆ ಮಾಡಿದರು
ಹಾಗೇ ಸಭೆಯಲ್ಲೂ ಕೂಡಾ ಉತ್ತಮವಾಗಿ ಸ್ಪಂದನೆ ಸಿಕ್ಕಿದ್ದು ಜಾರಿಯಾಗುವ ಭರವಸೆಯನ್ನು ನೀಡಿದ್ದಾರೆ ಎಂದರು