ಬೆಂಗಳೂರು –
ವರ್ಗಾವಣಾ ಶಿಕ್ಷಕ ಆಕಾಂಕ್ಷಿಗಳಿಗೆ ತುರ್ತು ಸಂದೇಶವನ್ನು ಸಹ ನಿರ್ದೇಶಕರು ಬೆಳಗಾವಿ ವಿಭಾಗ ಇವರು ರವಾನೆ ಮಾಡಿದ್ದಾರೆ ಹೌದು ವಿಭಾಗ ಮಟ್ಟದಲ್ಲಿ ಜರುಗ ಬೇಕಾಗಿರುವ ವರ್ಗಾವಣೆಯ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಶಿಕ್ಷಕರ ಹಿತದೃಷ್ಟಿಯಿಂದ ಜಿಲ್ಲಾ ಹಂತದಲ್ಲಿ ನಿರ್ವಹಿಸುವಂತೆ ರಾಜ್ಯ ಕಚೇರಿಯವರು ತಿಳಿಸಿರುತ್ತಾರೆ.
ಪ್ರಯುಕ್ತ ವಿಭಾಗದ ಒಳಗೆ ಕೋರಿಕೆ ವರ್ಗಾ ವಣೆಗೆ ಅರ್ಜಿ ಸಲ್ಲಿಸಿದ ಶಿಕ್ಷಕರು ಆಯಾ ಜಿಲ್ಲೆ ಯಲ್ಲಿಯೇ ವಿಭಾಗಿಯ ಕೋರಿಕೆ ವರ್ಗಾವಣೆಗೆ ಹಾಜರಾಗಬೇಕಿರುತ್ತದೆ ಯಾರೂ ಕೂಡ ವಿಭಾಗ ಹಂತದಲ್ಲಿ ಕೌನ್ಸಿಲಿಂಗ್ ಗೆ ಹಾಜರಾಗುವ ಅಗತ್ಯ ವಿಲ್ಲ ರೌಂಡ್ರೋಬಿನ್(Round Robin) ಮೂಲಕ ಆಯಾ ಉಪನಿರ್ದೇಶಕರ ಕಚೇರಿಯಲ್ಲಿಯೆ ಕೌನ್ಸಿಲಿಂಗ್ ಜರುಗಿಸುವುದು.
ಕಾರಣ ಎಲ್ಲ ಜಿಲ್ಲೆಯವರು ತಾವು ಜಿಲ್ಲಾ ಮಟ್ಟದಲ್ಲಿ ಕೌನ್ಸಿಲಿಂಗ್ ಮಾಡಿದಂತೆ, ವಿಭಾಗ ಮಟ್ಟದ ಕೌನ್ಸಿಲಿಂಗ್ ಸಹ ಜಿಲ್ಲಾ ಹಂತದಲ್ಲಿ ನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಹ ನಿರ್ದೇಶಕರು ಬೆಳಗಾವಿ ವಿಭಾಗ, ಬೆಳಗಾವಿ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..