ಬೆಂಗಳೂರು –
ಒಂದು ಕಡೆ ಮೂರನೇಯ ಅಲೆಯ ಆತಂಕ ಮತ್ತೊಂದು ಕಡೆಗೆ ರಾಜ್ಯದಲ್ಲಿ ಶಾಲೆಗಳ ಆರಂಭ ಹೌದು ಇನ್ನೊಂದೇ ವಾರದಲ್ಲಿ ಶಾಲೆಗಳು ರಾಜ್ಯ ದಲ್ಲಿ ಆರಂಭವಾಗಲಿದ್ದು ಇಂದು ಶಾಲೆಗಳಿಗೆ ಮಾರ್ಗಸೂಚಿಗಳು ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈಗಾಗಲೇ ಹೇಳಿದ್ದಾರೆ ಇನ್ನೂ ಇದರ ನಡುವೆ ಆಗಸ್ಟ್ 23 ರ ಒಳಗಾಗಿ ಶಿಕ್ಷಕರು ವ್ಯಾಕ್ಸಿನ್ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಆಗಸ್ಟ್ 23ರಿಂದ ಶಾಲೆಗಳು ಆರಂಭವಾಗುತ್ತಿದ್ದು ಅಷ್ಟರಲ್ಲಿ ಎಲ್ಲಾ ಶಿಕ್ಷಕರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಸೂಚಿಸಲಾಗಿದೆ. ಶೇ.80 ರಷ್ಟು ಎಲ್ಲೆಡೆ ಲಸಿಕೆ ಹಾಕಲಾಗಿದೆ ಎಂದರು.

ಇನ್ನೂ ಶೇ.2 ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಕಡೆ ಮಾತ್ರ ಶಾಲೆಗಳನ್ನು ಆರಂಭಿಸಲಾಗುತ್ತದೆ. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ. ಸರ್ಕಾರ ಪೋಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿಯೇ ನಿಂತಿದೆ. ಸೋಂಕು ಪತ್ತೆಯಾದರೆ ಅಂತಹ ಶಾಲೆಗ ಳನ್ನು ಬಂದ್ ಮಾಡಲಾಗುವುದು ಎಂದು ಹೇಳಿದರು